ಧಾರವಾಡ: ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ. ಹಲವೆಡೆಯಂತೂ ಮಳೆರಾಯನ ಅಟ್ಟಹಾಸ ತುಸು ಹೆಚ್ಚಾಗುತ್ತಿದೆ. ಸತತವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಹಲವೆಡೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಜನ – ಜೀವನ ಅಸ್ತವ್ಯಸ್ಥವಾಗುತ್ತಿದೆ. ಧಾರವಾಡದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಮನೆ ಗೋಡೆ ಕುಸಿದು ಬಿದ್ದು ಅವಾಂತರವನ್ನೇ ಸೃಷ್ಟಿಸಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮನೆ ಗೋಡೆ ಕುಸಿದ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಶಿದ್ದರ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಯಲ್ಲಪ್ಪ ರಾಮಣ್ಣ ಇಪ್ಪಿಯವರ (40), ಹನುಮವ್ವ ಇಪ್ಪಿಯವರ (35) ಹಾಗೂ ಯಲ್ಲಕ್ಕ ಇಪ್ಪಿಯವರ ಗಾಯಗೊಂಡಿದ್ದಾರೆ.
ಈ ಕುಟುಂಬ ಮನೆಯ ಪಕ್ಕದಲ್ಲಿ ಜೋಪಡಿಯಲ್ಲಿ ವಾಸ ಇತ್ತು. ಮನೆ ಗೋಡೆ ಜೋಪಡಿ ಮೇಲೆ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.