ಮೈಸೂರು : ಪ್ರಚೋದನಕಾರಿ ಭಾಷಣ ಮಾಡಿರೋರಿಗೆ ಸಮಸ್ಯೆ ಆಗತ್ತೆ. ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸುದ್ಧಿಗಾರರೊಂದಿಗೆ ಪ್ರಚೋದನಕಾರಿ ಭಾಷಣ ತಡೆ ಕಾಯ್ದೆ ವಿಚಾರ ಮಾತನಾಡಿ ಪ್ರಚೋದನಕಾರಿ ಭಾಷಣ ಮಾಡಿರೋರಿಗೆ ಸಮಸ್ಯೆ ಆಗತ್ತೆ. ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು. ಇದು ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಎಲ್ಲರಿಗೂ ಈ ಕಾನೂನು ಅಪ್ಲೈ ಆಗತ್ತೆ. ಇಂತಹ ಪ್ರಚೋದನಕಾರಿ ಭಾಷಣದಿಂದ ಸಮಾಜದಲ್ಲಿ ಶಾಂತಿ ಕಾಪಾಡಲು ಆಗತ್ತಾ?, ಬಿಜೆಪಿ ಅವರು ಪ್ರಚೋದನಕಾರಿ ಭಾಷಣ ಮಾಡ್ತಿದ್ದಾರೆ. ಅದಕ್ಕೆ ಅವರು ಈ ಕಾನೂನಿಗೆ ವಿರೋಧ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ.
ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನುವ ಬಿಜೆಪಿ ಆರೋಪ ವಿಚಾರ
ಈವರೆಗೂ 23 ತಿಂಗಳು ಹಣ ಕೊಟ್ಟಿದ್ದೇವೆ. ಹಣ ಲಪಟಾಯಿಸಲು ಹೇಗೆ ಸಾಧ್ಯ? ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗತ್ತೆ. ಗೃಹಲಕ್ಷ್ಮಿ ಹಣ ಯಾರು ಲಪಟಾಯಿಸಲು ಆಗಲ್ಲ. 2 ತಿಂಗಳು ಹಣ ಹಾಕಿಲ್ಲ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.
ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಖರ್ಗೆ ಹೇಳಿಕೆ ವಿಚಾರ
ಹೌದು ಖರ್ಗೆ ಹೇಳಿಕೆ ಸರಿಯಿದೆ. ಪಕ್ಷಕ್ಕಿಂತ ಯಾರು ದೊಡ್ಡವರಿಲ್ಲ ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ನಾವು ತೀರ್ಮಾನ ಮಾಡುತ್ತೇವೆ ಅಂತ ಹೇಳಿದ್ದಾರೆ. ಹೈ ಕಮಾಂಡ್ ತೀರ್ಮಾನ ಮಾಡತ್ತೆ ಎಂದಿದ್ದಾರೆ.
ಇದನ್ನೂ ಓದಿ : ಹರಿದ ಜೀನ್ಸ್ ಧರಿಸುವಂತಿಲ್ಲ, ಲಂಚಕ್ಕೆ ಕೈಚಾಚುವಂತಿಲ್ಲ : ಸರ್ಕಾರಿ ನೌಕರರಿಗೆ ಇಲ್ಲಿವೆ ಸ್ಟ್ರಿಕ್ಟ್ ರೂಲ್ಸ್



















