ನವದೆಹಲಿ: ಇದೇ ಮೊದಲ ಬಾರಿಗೆ ತೆಲುಗು ನಟ ನಾಗಚೈತನ್ಯ (Naga Chaitanya) ಅವರು ನಟಿ ಸಮಂತಾ ರುತ್ ಪ್ರಭು ಅವರೊಂದಿಗಿನ ವಿಚ್ಛೇದನದ ಕುರಿತು ಮಾತನಾಡಿದ್ದು, ವಿಚ್ಛೇದನವು ನಮ್ಮಿಬ್ಬರ ಪರಸ್ಪರ ಒಪ್ಪಿಗೆಯ ನಿರ್ಧಾರವಾಗಿತ್ತು ಎಂದಿದ್ದಾರೆ. ಪಾಡ್‌ಕಾಸ್ಟ್‌ವೊಂದರಲ್ಲಿ ಮನಬಿಚ್ಚಿ ಮಾತನಾಡಿರುವ ಅವರು, ಸಮಂತಾ ಮತ್ತು ತಮ್ಮ ನಡುವಿನ ಸಂಬಂಧ, ಬ್ರೇಕಪ್ ಕುರಿತು ಬಾಯಿಬಿಟ್ಟಿದ್ದಾರೆ.
ನಾವಿಬ್ಬರೂ ವೈಯಕ್ತಿಕ ಕಾರಣಗಳಿಗಾಗಿ ದೂರವಾದೆವು. ಪರಸ್ಪರರ ಆಯ್ಕೆಗಳನ್ನು ಗೌರವಿಸುತ್ತಲೇ ಬ್ರೇಕಪ್ ಆಗುವ ನಿರ್ಧಾರ ಕೈಗೊಂಡೆವು. ನಾವು ಇಬ್ಬರೂ ನಮ್ಮಿಚ್ಛೆಯ ಹಾದಿಯಲ್ಲಿ ಸಾಗಲು ಬಯಸಿದ್ದೆವು. ಈ ಕಾರಣಕ್ಕಾಗಿಯೇ ನಾವು ಇಂತಹ ನಿರ್ಧಾರ ಕೈಗೊಂಡೆವು. ಇದಕ್ಕಿಂತ ಹೆಚ್ಚಿನ ವಿವರಣೆಯ ಅಗತ್ಯವೇನಿದೆ, ನನಗೆ ಅರ್ಥವಾಗುತ್ತಿಲ್ಲ. ನಮಗೆ ಖಾಸಗಿತನ ಬಹಳ ಮುಖ್ಯ. ಮಾಧ್ಯಮಗಳು ಮತ್ತು ಸಾರ್ವಜನಿಕರು ನಮ್ಮ ಖಾಸಗಿತವನ್ನು ಗೌರವಿಸಬೇಕು ಎಂದು ಬಯಸುತ್ತೇವೆ. ಆದರೆ ನಾವು ಏನು ಮಾಡಿದರೂ ಅದು ಹೆಡ್ ಲೈನ್ ಆಗುತ್ತದೆ. ಗಾಳಿಸುದ್ದಿಗಳಿಗೆ ರೆಕ್ಕೆ ಕಟ್ಟಿ ಹಾರಿಬಿಡಲಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ನಾನು-ಸಮಂತಾ ಇಬ್ಬರೂ ಪರಸ್ಪರರನ್ನು ಗೌರವಿಸುತ್ತೇವೆ. ನಮ್ಮ ನಮ್ಮ ಬದುಕಿನಲ್ಲಿ ನಾವು ಸಂತೋಷವಾಗಿದ್ದೇವೆ. ನನಗೀಗ ಹೊಸ ಪ್ರೀತಿ ಸಿಕ್ಕಿದೆ. ನಾನು ಸಂತಸದಲ್ಲಿದ್ದೇನೆ. ಇಂಥದ್ದೆಲ್ಲ ನನ್ನ ಒಬ್ಬನ ಬದುಕಿನಲ್ಲಿ ಮಾತ್ರ ನಡೆಯುತ್ತಿಲ್ಲವಲ್ಲ, ಮತ್ಯಾಕೆ ನನ್ನನ್ನು ಕ್ರಿಮಿನಲ್ ರೀತಿ ನಡೆಸಿಕೊಳ್ಳುತ್ತೀರಿ? ಎಂದೂ ನಾಗಚೈತನ್ಯ ಪ್ರಶ್ನಿಸಿದ್ದಾರೆ. ಅಲ್ಲದೆ, ನಾನು ವಿಚ್ಛೇದನದ ನಿರ್ಧಾರ ಕೈಗೊಳ್ಳುವ ಮೊದಲು ಎಲ್ಲ ಪರಿಣಾಮಗಳನ್ನೂ ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದೇನೆ. ನಾನು ಕೂಡ ವಿಭಜನೆಗೊಂಡ ಕುಟುಂಬದಿಂದ ಬಂದವನು. ಪ್ರತ್ಯೇಕವಾಗುವುದರ ಅನುಭವ ನನಗಿದೆ. ಯಾವುದೇ ಸಂಬಂಧವನ್ನು ಕಡಿದುಕೊಳ್ಳುವ ಮುನ್ನ ನಾನು 1000 ಬಾರಿ ಯೋಚಿಸುತ್ತೇನೆ. ಪರಿಣಾಮಗಳೂ ಏನೆಂದು ನನಗೆ ಗೊತ್ತಿದೆ. ನಾನು-ಸಮಂತಾ ಇಬ್ಬರೂ ಕುಳಿತು, ಚರ್ಚಿಸಿ ಪರಸ್ಪರ ಒಪ್ಪಿಗೆಯಿಂದಲೇ ವಿಚ್ಛೇದನ ಪಡೆದಿದ್ದೇವೆ ಎಂದಿದ್ದಾರೆ.’
ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಈಗ ಸಿನಿಮಾ ನಟಿ!
ನಾಗಚೈತನ್ಯ ಮತ್ತು ಸಮಂತಾ ಅವರು 2017ರಲ್ಲಿ ವಿವಾಹವಾಗಿ, 2021ರಲ್ಲಿ ವಿಚ್ಛೇತನ ಪಡೆದಿದ್ದರು. ಈಗ ನಾಗಚೈತನ್ಯ ಅವರು ನಟಿ ಶೋಭಿತಾ ಧೂಲಿಪಾಲಾ ಅವರನ್ನು ವಿವಾಹವಾಗಿದ್ದಾರೆ.