ಪಾಟ್ನಾ/ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ತಮ್ಮ ಕುಟುಂಬವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ತಮ್ಮ ಈ ನಿರ್ಧಾರದ ಹಿಂದೆ ಸಹೋದರ ತೇಜಸ್ವಿ ಯಾದವ್ ಅವರ ಆಪ್ತರಾದ ಸಂಸದ ಸಂಜಯ್ ಯಾದವ್ ಹಾಗೂ ರಮೀಜ್ ನೆಮತ್ ಖಾನ್ ಎಂಬವರ ಒತ್ತಡವಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪದ ಮೂಲಕ ಬಿಹಾರ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ರಮೀಜ್ ಖಾನ್ ಹೆಸರು ಮುನ್ನೆಲೆಗೆ ಬಂದಿದೆ.
ಯಾರು ಈ ರಮೀಜ್ ನೆಮತ್ ಖಾನ್?
ರಮೀಜ್ ನೆಮತ್ ಖಾನ್, ತೇಜಸ್ವಿ ಯಾದವ್ ಅವರ ಆಪ್ತ ಸ್ನೇಹಿತ ಮತ್ತು ಅವರ ಕೋರ್ ಟೀಂನ ಪ್ರಮುಖ ಸದಸ್ಯ. ಇವರಿಬ್ಬರ ಸ್ನೇಹ ಕ್ರಿಕೆಟ್ ಮೈದಾನದಿಂದ ರಾಜಕೀಯದ ಅಂಗಳದವರೆಗೂ ಬೆಳೆದಿದೆ. ಉತ್ತರ ಪ್ರದೇಶದ ನಿವಾಸಿಯಾಗಿರುವ ರಮೀಜ್, ತೇಜಸ್ವಿ ಯಾದವ್ ಮತ್ತು ಆರ್‌ಜೆಡಿ ಪಕ್ಷದ ಸಾಮಾಜಿಕ ಮಾಧ್ಯಮ ಹಾಗೂ ಪ್ರಚಾರ ತಂಡಗಳನ್ನು ನೋಡಿಕೊಳ್ಳುತ್ತಾರೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ. ರಮೀಜ್ ಅವರು ಉತ್ತರ ಪ್ರದೇಶದ ಬಲರಾಂಪುರ (ಈಗಿನ ಶ್ರಾವಸ್ತಿ) ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಿಜ್ವಾನ್ ಜಹೀರ್ ಅವರ ಅಳಿಯ.
ಕ್ರಿಕೆಟ್‌ನಿಂದ ಕ್ರಿಮಿನಲ್ ಲೋಕದವರೆಗೆ
ನವೆಂಬರ್ 1986ರಲ್ಲಿ ಜನಿಸಿದ ರಮೀಜ್, ದೆಹಲಿಯ ಪ್ರತಿಷ್ಠಿತ ಶಾಲೆ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಿಂದಲೂ ಕ್ರಿಕೆಟಿಗರಾಗಿದ್ದ ಅವರು, ದೆಹಲಿ ಮತ್ತು ಜಾರ್ಖಂಡ್‌ನ ಹಲವು ವಯೋಮಿತಿಯ ತಂಡಗಳಲ್ಲಿ ಆಡಿದ್ದಾರೆ. 2008-09ರಲ್ಲಿ ಜಾರ್ಖಂಡ್‌ನ 22 ವರ್ಷದೊಳಗಿನವರ ತಂಡದ ನಾಯಕರಾಗಿದ್ದರು. ಈ ಸಮಯದಲ್ಲಿ ತೇಜಸ್ವಿ ಯಾದವ್ ಅವರೊಂದಿಗೆ ಸ್ನೇಹ ಬೆಳೆದು, ಅದು ಅವರನ್ನು ರಾಜಕೀಯಕ್ಕೆ ಕರೆತಂದಿತು. 2016ರಲ್ಲಿ ಆರ್‌ಜೆಡಿ ಸೇರಿದ ರಮೀಜ್, ಅಂದಿನಿಂದ ತೇಜಸ್ವಿ ತಂಡದ ಪ್ರಮುಖ ಭಾಗವಾಗಿದ್ದಾರೆ.
ಹಲವಾರು ಗಂಭೀರ ಆರೋಪಗಳು
ಇದಲ್ಲದೆ, ಬಲರಾಂಪುರದಲ್ಲಿ 9 ಮತ್ತು ಕೌಶಂಬಿಯಲ್ಲಿ 2 ಪ್ರಕರಣಗಳು ಅವರ ಮೇಲಿವೆ. ಸದ್ಯ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಹಲವು ಪ್ರಕರಣಗಳಲ್ಲಿ ರಮೀಜ್ ದಂಪತಿಗೆ ರಿಲೀಫ್ ಸಿಕ್ಕಿದೆ
ಇದನ್ನೂ ಓದಿ: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಣೆ : ಆರ್‌ಎಸ್‌ಎಸ್ ಕಾರ್ಯಕರ್ತ ಆತ್ಮಹತ್ಯೆ



















