ಬೆಂಗಳೂರು | ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಟಿಕೆಟ್ ಆಯ್ಕೆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿಯೇ ಪರಿಣಮಿಸಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ಸ್ಥಳೀಯ ನಾಯಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.
ಟಿಕೆಟ್‌ಗಾಗಿ ಮೇಟಿ ಹಾಗೂ ಶಾಮನೂರು ಕುಟುಂಬಗಳು ತೀವ್ರ ಒತ್ತಾಯ ಮಾಡುತ್ತಿದ್ದು, ಪಕ್ಷದ ಒಳಗೇ ಅಸಮಾಧಾನ ಹೆಚ್ಚಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಬೆಂಬಲಿಗರ ಒತ್ತಡವೂ ನಾಯಕತ್ವದ ಮೇಲೆ ಹೆಚ್ಚಾಗಿದೆ.
ಈ ಹಿನ್ನೆಲೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಲವು ಬಾರಿ ಸಭೆ ನಡೆಸಿ ಸಮನ್ವಯ ಸಾಧಿಸಲು ಪ್ರಯತ್ನಿಸಿದ್ದಾರೆ. ಅಭ್ಯರ್ಥಿಗಳ ಬಗ್ಗೆ ವಿವರವಾದ ವರದಿ ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ.
ಇದೀಗ ಅಂತಿಮ ತೀರ್ಮಾನದ ಜವಾಬ್ದಾರಿ ದೆಹಲಿ ನಾಯಕರ ಹೆಗಲಿಗೆ ಹೋಗಿದೆ. ಇಂದು ಸಂಜೆ ಅಂತಿಮ ಚರ್ಚೆ ಬಳಿಕ, ಅಥವಾ ನಾಳೆಯೊಳಗೆ ಉಭಯ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ : ರಂಜಾನ್ ಹಬ್ಬದಂದೇ ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ!



















