ರಾಜ್ಯ ಬಿಜೆಪಿ ಮುಂದಿನ ಸಾರಥಿ ಯಾರಾಗ್ತಾರೆ. ಈಗಾಗಲೇ ವಿಜಯೇಂದ್ರ ಇನ್ನೊಂದು ಅವಧಿಗೆ ಮುಂದುವರಿಯುವುದು ನಿಶ್ಚಿತ ಅಂತಿವೆ ಕೇಸರಿ ಪಾಳಯದ ಒಳ ಮಾತುಗಳು. ಆದರೆ, ಈ ಹಿಂದೆ 14 ರಾಜ್ಯ ಘಟಕಗಳ ಅಧ್ಯಕ್ಷರನ್ನು ನೇಮಿಸಿ ಹೆಸರು ಘೋಷಿಸಲಾಗಿತ್ತು. ಮೊನ್ನೆ ನಾಲ್ಕು ರಾಜ್ಯಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು. ಹೀಗಿದ್ದರೂ ಕರ್ನಾಟಕದ ವಿಚಾರದಲ್ಲಿ ಇನ್ನೂ ಮೀನಮೇಷ ಯಾಕೆ ಅನ್ನೋದು ಖುದ್ದು ರಾಜ್ಯ ಬಿಜೆಪಿ ನಾಯಕರಲ್ಲೇ ಗೊಂದಲ ಮೂಡಿಸಿದೆ.
ಹಾಗೆ ನೋಡಿದರೆ, ಇತ್ತೀಚಿನ ದಿನಗಳಲ್ಲಿ ಸಂಘಟನೆ ವಿಚಾರದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತೆ ಫುಲ್ ಆಕ್ಟಿವ್ ಆಗಿದ್ದಾರೆ. ಅಷ್ಟೇ ಅಲ್ಲಾ ನನ್ನ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದೇನೆ. ನನಗೆ ಅನ್ಯಾಯವಾಗೋದಿಲ್ಲ ಅಂತಾ ವಿಜಯೇಂದ್ರ ವಿಶ್ವಾಸದಲ್ಲಿದ್ದಾರೆ.
ಹೀಗಿದ್ದಾಗ, ನಿಜಕ್ಕೂ ಹೈಕಮಾಂಡ್ ಅದ್ಯಾವ ವಿಚಾರದಲ್ಲಿ ಕಾದು ನೋಡುವ ಕಾರ್ಯ ಮಾಡುತ್ತಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇನ್ನೊಂದೆಡೆ ಅತೃಪ್ತ ಬಸನಗೌಡ ಪಾಟೀಲ್ ಯತ್ನಾಳ ರನ್ನ ಪಕ್ಷದಿಂದ ಉಚ್ಛಾಟಿಸಲಾಗಿದೆ. ಆದರೆ, ಭಿನ್ನರ ಬಣವಿನ್ನೂ ತಮ್ಮ ಹಿಂದಿನ ಹೋರಾಟಕ್ಕೆ ಬದ್ಧ ಅಂತಲೇ ಹೇಳಿಕೊಂಡು ಒಡಾಡುತ್ತಿದೆ. ಇದರ ನಡುವೆ, ಹೈಕಮಾಂಡ್ ನ ನಿಧಾನ ಧೋರಣೆ ಹೊಸ ತಿರುವನ್ನು ನೀಡುತ್ತಾ ಅನ್ನೋ ಪ್ರಶ್ನೆ ಮೂಡಿಸಿದೆ.