ಮೋಹಕತಾರೆ ನಟಿ ರಮ್ಯಾ ಮನಸ್ಸು ನಾಯಿ ಪ್ರೀತಿಗಾಗಿ ಮಿಡಿಯುತ್ತಿದೆ. ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ರಮ್ಯಾ ಅಪರೂಪಕ್ಕೆ ಜನರ ಮುಂದೆಯೇ ಪ್ರತಿಭಟನೆಗಿಳಿದಿದ್ದಾರೆ. ‘ದಯವಿಟ್ಟು ಹೀಗೆಲ್ಲಾ ಮಾಡ್ಬೇಡಿ ಪ್ಲೀಸ್’ ಅಂತ ರಮ್ಯಾ ಗೋಗರೆಯುತ್ತಿದ್ದಾರೆ.

ಹೌದು. ನಟಿ ರಮ್ಯಾಗೆ ಪ್ರಾಣಿಗಳಂದ್ರೆ ಎಲ್ಲಿಲ್ಲದ ಪ್ರೀತಿ..! ಆಗಾಗ ಸಾಮಾಜಿಕ ಜಾಲತಾಣಗಳಲ್ಲೂ ರಮ್ಯಾ ಇದಕ್ಕೆ ಸಾಕ್ಷಿಯಾಗುತ್ತಾ ಇರುತ್ತಾರೆ. ಇದೀಗ ಬೀದಿ ನಾಯಿಗಳ ಮೇಲಿನ ಕ್ರೌರ್ಯ, ಹಿಂಸೆಗಳನ್ನು ಖಂಡಿಸಿ ರಮ್ಯಾ ಕಂಬನಿ ಮಿಡಿದಿದ್ದಾರೆ. ನಾಯಿಗಳ ಮಿಸ್ಸಿಂಗ್ ಕೇಸ್ ಮತ್ತು ಹಿಂಸೆಯ ಬಗ್ಗೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ರಮ್ಯಾ ಮನಸ್ಸಿನ ಕಟ್ಟೆ ಒಡೆದುಹೋಗಿದೆ..!

ನಾಯಿಗಳ ಸಂರಕ್ಷಣೆಗೆ ಮುಂದಾದ ರಮ್ಯಾ ಬೆಂಗಳೂರು ಪ್ರಾಣಿಪ್ರಿಯರ ಜೊತೆಗೆ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆಗಿಳಿದಿದ್ರು. ಇತ್ತೀಚೆಗೆ ಕಗ್ಗದಾಸಪುರದಲ್ಲಿ ನಾಯಿಗಳನ್ನ ಚೀಲಗಳಲ್ಲಿ ಕಟ್ಟಿ ಕರೆದೊಯ್ದ ಅಮಾನವೀಯ ಘಟನೆಯನ್ನು ಸಹಿಸಿಕೊಳ್ಳಲಿಲ್ಲ. ಅದು ನಮ್ಮಂತೆ ಒಂದು ಜೀವಿ ಎಂಬುದೇ ರಮ್ಯಾ ಕಣ್ಣೀರಿನ ತಾತ್ಪರ್ಯವಾಗಿತ್ತು..!
ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿರೋ ರಮ್ಯಾ, ಶ್ವಾನಗಳ ಮೇಲಾಗ್ತೀರೋ ಕ್ರೌರ್ಯವನ್ನು ಪದೇಪದೇ ಖಂಡಿಸುತ್ತಲೇ ಬರುತ್ತಿದ್ದಾರೆ. ಬೀದಿ ನಾಯಿಗಳ ಪರವಾಗಿ ಒಂದು ಆಂದೋಲನವನ್ನೇ ಸೃಷ್ಟಿಸಿರುವ ರಮ್ಯಾ, ಶ್ವಾನಪ್ರಿಯರ ಪ್ರೀತಿಗೆ ಕಾರಣವಾಗಿದ್ದಾರೆ. ಸದ್ಯಕ್ಕೆ ರಮ್ಯಾ ಕಂಬನಿ ಮಿಡಿಯೊ ವಿಡಿಯೋ ವೈರಲ್ ಆಗುತ್ತಿದ್ದು, ಮಾನವೀಯತೆ ಮರೆಯಬೇಡಿ ಎಂಬ ಮೆಸೇಜ್ ಮಾತ್ರ ಸಕತ್ತಾಗೆ ಚಾಲ್ತಿಯಲ್ಲಿದೆ.
ಇದನ್ನೂ ಓದಿ: ದಿಗ್ಗಜ ಗಾಯಕಿ ಆಶಾ ಭೋಸ್ಲೆಗೆ ಕಂಬನಿ ಮಿಡಿದ ವಾಂಖೆಡೆ ಕ್ರೀಡಾಂಗಣ – ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ MI, RCB ಆಟಗಾರರು



















