ನಿರೂಪಕಿ, ಆ್ಯಂಕರ್ ಅನುಶ್ರೀ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಕರ್ನಾಟಕದ ಮನೆಮಗಳಾಗಿರುವ ಅನುಶ್ರೀ ಅವರ ಮದುವೆ ಮಾತುಕತೆಯಂತೂ ಸದಾ ಸುದ್ದಿಯಲ್ಲಿರುತ್ತದೆ.
ಆ್ಯಂಕರ್ ಅನುಶ್ರೀ ಪತಿ, ಅನುಶ್ರೀ ಮದುವೆ ವಿಡಿಯೋ ನೋಡಿ, ಮದುಮಗಳಾದ ಅನುಶ್ರೀ ಎಂದೆಲ್ಲಾ ನೂರಾರು ವಿಡಿಯೋ ಹಾಗೂ ಸುದ್ದಿಗಳನ್ನು ಈಗಾಗಲೇ ನೀವು ನೋಡಿರಬಹುದು.ಆದರೆ ಇದೀಗ ಅನುಶ್ರೀ ಮದುವೆ ಬಗ್ಗೆ ಅಧೀಕೃತವಾದ ಮಾಹಿತಿಯೊಂದು ಹೊರಬಿದ್ದಿದೆ. ಬೇರೇ ಯಾರೋ ಅಲ್ಲ, ಸ್ವತಃ ನಿರೂಪಕಿ ಅನುಶ್ರೀಯೇ ತಮ್ಮ ಮದುವೆ ಹಾಗೂ ಭಾವಿ ಪತಿಯ ಬಗ್ಗೆ ಮಾತನಾಡಿದ್ದಾರೆ.
ಇನ್ಸ್ಟಾಗ್ರಾಮ್ ಲೈವ್ನಲ್ಲೇ ನಟಿ ಮಲೈಕಾ ವಸುಪಾಲ್ ನಿಮ್ಮ ಮದುವೆ ಯಾವಾಗ ಎಂದು ನಾಗಭೂಷಣ್ ಕೇಳುತ್ತಿದ್ದಾರೆ ಎಂದು ಅನುಶ್ರೀಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅನುಶ್ರೀ ಈ ವರ್ಷವೇ ಎಂದಿದ್ದಾರೆ. ಇದೇ ವೇಳೆ ತಮ್ಮ ಹುಡುಗ ಹೇಗಿರಬೇಕು ಎಂದು ಮಾತನಾಡಿದ ಅನುಶ್ರೀ ನನ್ನ ಹುಡುಗ ತುಂಬಾ ಜವಾಬ್ದಾರಿಯುತ ವ್ಯಕ್ತಿಯಾಗಿರಬೇಕು ಎಂದಿದ್ದಾರೆ.
ಮಲೈಕಾ ತಮ್ಮ ಹುಡುಗ ಹೇಗಿರಬೇಕು ಎಂದೆಲ್ಲಾ ಮಾತನಾಡುತ್ತಿರುವ ನಡುವೆಯೇ, ಅನುಶ್ರೀ ಅಕ್ಕಾ, ನಿಮ್ಮ ಗಂಡ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ.
ಆಗ ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ದರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ. ಕೊನೆಗೆ ಮಲೈಕಾ ಅವರು ಯಾವಾಗ ಮದುವೆ ಎಂದು ಕೇಳಿದಾಗ, ನಾಳೆ ವಿದ್ಯಾಪತಿ, ಈ ವರ್ಷ ಅನುಪತಿ ಬಂದೇ ಬರುತ್ತಾನೆ ಎಂದಿದ್ದಾರೆ. ಈ ಕುರಿತ ವಿಡಿಯೋ ಈಗ ವೈರಲ್ ಆಗಿದೆ.
ಅನುಶ್ರೀ ಅವರ ಮದುವೆ ಕುರಿತು ಅನೇಕ ಕಾರ್ಯಕ್ರಮಗಳಲ್ಲಿ ಅವರ ಬಳಿ ಪ್ರಶ್ನೆ ಕೇಳಲಾಗುತ್ತಿತ್ತು. ಈ ವೇಳೆ ನಟಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆಯೇ ಮಾತನಾಡುತ್ತಿದ್ದರು. ಇದೀಗ ವಿವಾಹ ಕುರಿತು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ನೋಡೋಣ ಈ ವರ್ಷವೇ ಆ್ಯಂಕರ್ ಅನುಶ್ರೀ ಮದುವೆ ಯಾವಾಗ ಅಂತ?