ಬೆಂಗಳೂರಿನ ಇತಿಹಾಸದ ಅತ್ಯಂತ ಕರಾಳ ಅಧ್ಯಾಯವಾಗಿರುವ ಆರ್ ಸಿಬಿ ಕಾಲ್ತುಳಿತ ಪ್ರಕರಣದ ಕಾರಣೀಕರ್ತರನ್ನು ಸರ್ಕಾರ ಗುರುತಿಸಿದೆ.
ಹೌದು! ಹೈಕೋರ್ಟ್ ಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಈ ಕಾಲ್ತುಳಿತ ದುರಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ನೇರ ಹೊಣೆ ಅಂತಾ ಉಲ್ಲೇಖಿಸಿದೆ. ತಂಡದ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರಗಳೇ 11 ಜನರ ದುರಂತ ಸಾವು ಹಾಗೂ 50ಕ್ಕೂ ಹೆಚ್ಚು ಜನರು ಗಾಯಗೊಳ್ಳಲು ಕಾರಣ ಎಂದಿದೆ.
ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಆರ್ ಸಿಬಿ ಮ್ಯಾನೇಜ್ ಮೆಂಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ಆಹ್ವಾನಿಸುವ ಮೊದಲು ನಗರದ ಪೊಲೀಸರೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸಿಲ್ಲ. ಸೂಕ್ತವಾದ ಅನುಮತಿಯನ್ನು ತೆಗೆದಕೊಳ್ಳದೆ ವಿಜಯೋತ್ಸವ ಮೆರವಣಿಗೆಗೆ ಆಹ್ವಾನ ನೀಡಿದೆ. ಈ ಅಚಾತುರ್ಯದಿಂದಲೇ 11 ಮಂದಿ ಬಲಿಯಾಗಿದ್ದಾರೆ. ಅಂತಾ ವರದಿಯಲ್ಲಿ ಉಲ್ಲೇಖವಾಗಿದೆ.