ದಾವಣಗೆರೆ : ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ, ನಮ್ಮ ಕ್ಷೇತ್ರಗಳಿವು. ಅವನ್ಯಾರು ಮಾತನಾಡೋಕೆ? ಇವೆಲ್ಲಾ ಸರಿ ಇರಲ್ಲ ಎಂದು ಸಚಿವ ಜಮೀರ್ ಅಹ್ಮದ್ ವಿರುದ್ಧ ಬಹಿರಂಗವಾಗಿ ಎಸ್.ಎಸ್.ಮಲ್ಲಿಕಾರ್ಜುನ ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ವಿಚಾರ ಮಾತನಾಡಿದ ಎಸ್.ಎಸ್.ಮಲ್ಲಿಕಾರ್ಜುನ, ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೆ ನೋಡೋಣ. ಹೈಕಮಾಂಡ್ ಹೇಗೆ ಹೇಳುತ್ತಾರೆ ಹಾಗೇ ದುಡಿಯೋಣ. ಮೀಟಿಂಗ್ ಕರೆದಾಗ ಏನು ಅಂತಾ ಕೇಳೋಣ ಎಂದು ಹೇಳಿದ್ದಾರೆ.
ಸೂಕ್ತ ಅಭ್ಯರ್ಥಿ ಬೇಕು ನಮಗೆ, ನಮ್ಮಲ್ಲಿ ಒಮ್ಮತ ಇದೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ಮಾಡ್ತೀವಿ. ನಾನು ಕಾರ್ಯಕರ್ತರ ಮೇಲೆ ಬಿಡ್ತೀನಿ, ನಾನೇನೂ ಮಧ್ಯಪ್ರವೇಶಿಸಲ್ಲ ಅವರು ಯಾರಿಗೆ ಹೇಳ್ತಾರೆ ಅವರನ್ನು ನಿಲ್ಲಿಸೋಣ. ಎಲ್ಲಾ ಸಮಾಜದವರು ಸೇರಿ ಸೂಕ್ತ ಅಭ್ಯರ್ಥಿಯನ್ನು ಚುನಾವಣೆ ನಿಲ್ಲಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಹಳ್ಳಿಯಿಂದ ಲಂಡನ್‌ವರೆಗೂ ಹಿಂದೂ ಹಬ್ಬ ಟಾರ್ಗೆಟ್!? ಸೆಕ್ಯುಲರ್ ಪ್ರಗತಿಪರರು ಇದಕ್ಕೆ ಉತ್ತರಿಸ್ತಾರಾ?



















