ಸ್ಲಿಮ್ ಆಗಿರಬೇಕು, ನಾವು ಕೂಡ ಸುಂದರವಾಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಅದರಂತೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಫಿಟ್ನೆಸ್ ಗಾಗಿ ಜಿಮ್ ಮೊರೆ ಹೋಗುತ್ತಾರೆ. ಜಿಮ್ ಗೆ ಹೋಗುವಾಗ ಅದಕ್ಕೆ ಹೊಂದುವಂತಹ ಬಟ್ಟೆಯನ್ನು ಧರಿಸುತ್ತಾರೆ. ಅಂದರೆ, ಪ್ಯಾಂಟ್, ಟಾಪ್, ಶಾರ್ಟ್ಸ್ ಈ ರೀತಿ ಬಟ್ಟೆಗಳನ್ನ ಧರಿಸಿ ಹೆಣ್ಣುಮಕ್ಕಳು ಎಕ್ಸರ್ಸೈಜ್ ಮಾಡುತ್ತಾರೆ.
ಆದರೆ ಇಲ್ಲೊಂದು ಕಡೆ ಕಡೆ ಹಸಿರು ಬಣ್ಣದ ಸೀರೆಯುಟ್ಟು ಮೇಕಪ್ ಮಾಡಿಕೊಂಡು ಜಿಮ್ ವರ್ಕ್ ಔಟ್ ಮಾಡಲು ಮಹಿಳೆ ಬಂದಿದ್ದು, ವಿಡಿಯೋ ವೈರಲ್ ಆಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಿನ್ನ ಮುಖದ ಮೇಲಿನ ನಗು ಸದಾ ಹೀಗೆ ಇರಲಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಹಸಿರು ಬಣ್ಣದ ಸೀರೇ ಉಟ್ಟು ಮೇಕಪ್ ಮಾಡಿಕೊಂಡು ಜಿಮ್ ವರ್ಕ್ ಮಾಡಲು ಬಂದಿರುವುದನ್ನು ನೋಡಬಹುದು.
ಆದರೆ ಈ ಮಹಿಳೆಯ ಮುಖದ ತುಂಬಾ ನಗುವಿದೆ. ಈ ವೇಳೆಯಲ್ಲಿ ಸರಿಸುಮಾರು 140 ಕೆಜಿ ಡೆಡ್ ಲಿಫ್ಟ್ ಮಾಡಿ ಒಂದು ಕ್ಷಣ ಎಲ್ಲರನ್ನು ನಿಬ್ಬೆರಾಗುವಂತೆ ಮಾಡಿದ್ದಾರೆ. ಆರಾಮದಾಯಕವಾಗಿ ಡೆಡ್ ಲಿಫ್ಟ್ ಮಾಡಿದ್ದು ನಗುತ್ತಿರುವುದನ್ನು ಕಾಣಬಹುದು.