ಬೆಂಗಳೂರು : ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದ ಹಿಂದೆ ರಾಜಕೀಯ ನಾಯಕರಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಬಿಜೆಪಿ ಫೋಟೋವೊಂದನ್ನು ಬಿಡುಗಡೆ ಮಾಡಿ, ಕಾಂಗ್ರೆಸ್ ವಿರುದ್ಧ ಬೊಟ್ಟು ಮಾಡಿದೆ.
ಗೋಲ್ಡ್ ಸ್ಮಗ್ಲರ್ ರನ್ಯಾ ಜೊತೆ ನಂಟಿರುವ ಸಚಿವರು ಯಾರು ಎಂಬುದನ್ನು ಬಹಿರಂಗಪಡಿಸುವಿರಾ? ಎಂದು ಪೋಸ್ಟ್ ಹಾಕಿರುವ ಬಿಜೆಪಿ, #CongressFailsKarnataka ಎನ್ನುವ ಶೀರ್ಷಿಕೆಯೊಂದಿಗೆ ಫೋಟೋ ಹಾಕಿದೆ. ಅಲ್ಲದೇ, ಕೆಪಿಸಿಸಿ ಹ್ಯಾಂಡಲ್ ಗೆ ಈ ಫೋಟೋ ಟ್ಯಾಗ್ ಮಾಡಿದೆ.
ಬಿಜೆಪಿಯು ರನ್ಯಾ ರಾವ್ ಮದುವೆ ಕಾರ್ಯಕ್ರಮವೊಂದರ ಫೋಟೋ ಬಿಡುಗಡೆ ಮಾಡಿದೆ. ಈ ಫೋಟೋದಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಇದ್ದಾರೆ. ಇದಕ್ಕೆ ಈಗ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.