ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ನಟ ಶ್ರೀಮುರುಳಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪ್ಪು ಮಾಮ ಎಲ್ಲೇ ಇದ್ದರೂ ನಗು ನಗುತ್ತಾ ಚೆನ್ನಾಗಿರು. ನಾವು ಅವರನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ. ಎಲ್ಲೋ ಒಂದು ಕಡೆ ನಮ್ಮ ಜೊತೆನೇ ಇದ್ದಾರೆ ಅನ್ನೋ ನಂಬಿಕೆಯಿದೆ. ಅಭಿಮಾನಿಗಳ ಪ್ರೀತಿಗೆ ನಾವು ಚಿರಋಣಿ. ಅವರಿಂದಲೇ ನಾವು, ಅವರೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
‘ಅಪ್ಪು’ ಸಿನಿಮಾ ಮೊದಲೇ ನೋಡಿದ್ದೇನೆ. ‘ಅಪ್ಪು’ ರೀ-ರಿಲೀಸ್ ಅಭಿಮಾನಿಗಳ ದಿನ ಎಂದಿದ್ದಾರೆ. ನನಗೆ ಗೊತ್ತಿರೋದು ಒಬ್ಬರೇ ಅಪ್ಪು ಮಾಮ, ಅವರೇ ಪವರ್ ಸ್ಟಾರ್. ಅವರಂತೆ ಮತ್ತೊಬ್ಬರು ಇಲ್ಲ. ಅವರ ಹಾಗೇ ಆಗೋದಕ್ಕೂ ಅಸಾಧ್ಯ ಎನ್ನುತ್ತಾ ಶ್ರೀಮುರಳಿ ಭಾವುಕರಾಗಿದ್ದಾರೆ.