ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ನಟಿ ರನ್ಯಾ ರಾವ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿಚ, ಹಾಲಿ ಶಾಸಕ ಸುನಿಲ್‌ಕುಮಾರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ರನ್ಯಾ ರಾವ್‌ಗೆ ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷೆ ಇದೆ. ಹೀಗಾಗಿಯೇ, ಅವರು ಗೋಲ್ಡ್ ಸ್ಮಗ್ಲಿಂಗ್ ವ್ಯವಹಾರ ಮಾಡುತ್ತಿದ್ರು. ಇಂದು ಡಿಆರ್‌ಐ ಅಧಿಕಾರಿಗಳ ಮೂಲಕ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್, ಈ ಹಿಂದೆ ತಂದಿರುವ ಚಿನ್ನ ಎಲ್ಲಿ ಹೋಗಿದೆ? ಎಂದು ಮಾಧ್ಯಮಗಳ ಮುಂದೆ ಪ್ರಶ್ನಿಸಿದ್ದಾರೆ.