ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾರೆ.
ದರ್ಶನ್ ಅವರು ಎ2 ಆರೋಪಿಯಾಗಿದ್ದಾರೆ. ಆದರೆ, ಅವರು ಜೈಲಿನಲ್ಲಿರುವುದು ಹಲವು ಅಭಿಮಾನಿಗಳು ಹಿಡಿಸುತ್ತಿಲ್ಲ. ಹೀಗಾಗಿ ಅವರು ಜೈಲಿನಿಂದ ಬೇಗ ಹೊರ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ಕೌಡೇಪಿರ ಲಾಲಸಾಬ ದೇವರು ಭವಿಷ್ಯ ನುಡಿದಿದ್ದು, ಅಭಿಮಾನಿಗಳು ಸಂತಸ ಪಡುವಂತಾಗಿದೆ.
ದರ್ಶನ್ ಬಂಧನವಾಗಿ ಎರಡು ತಿಂಗಳು ಕಳೆಯುತ್ತಿದೆ. ಜೈಲುವಾಸ ನರಕಯಾತನೆ ಆಗಿ ಬಿಟ್ಟಿದೆ. ಜೈಲೂಟ ಹೊಂದುತ್ತಿಲ್ಲ. ಶತಾಯ ಗತಾಯ ಅವರು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಸಾಧ್ಯವಾಗುತ್ತಿಲ್ಲ. ಚಾರ್ಜ್ಶೀಟ್ ಸಲ್ಲಿಕೆ ಮಾಡದೆ ಜಾಮೀನಿಗೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ.
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಕೌಡೇಪಿರ ಲಾಲಸಾಬ ಈ ಭವಿಷ್ಯ ನುಡಿದಿದ್ದಾರೆ. ದರ್ಶನ್ ಅಭಿಮಾನಿಗಳು ದೇವರ ಎದುರು ಪ್ರಶ್ನೆ ಇಟ್ಟಿದ್ದರು. ‘ದರ್ಶನ್ ಬಿಡುಗಡೆ ಯಾವಾಗ’ ಎನ್ನುವ ಪ್ರಶ್ನೆ ಕೇಳಿದ್ದರು. ‘ಮೂರೇ ತಿಂಗಳಲ್ಲಿ ದರ್ಶನ್ ಹೊರಕ್ಕೆ ಬರುತ್ತಾರೆ’ ಎಂದು ದೇವರು ಭವಿಷ್ಯ ನುಡಿದಿದ್ದಾರೆ ಈ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ. ಏಕೆಂದರೆ, ಕೌಡೇಪಿರನ ಭವಿಷ್ಯ ಇಲ್ಲಿಯವರೆಗೆ ಸತ್ಯವಾಗಿರುವುದು ಇದಕ್ಕೆ ಕಾರಣ.
2019ರಲ್ಲಿ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಅರೆಸ್ಟ್ ಆಗಿದ್ದಾಗ ಕೂಡ ಕೌಡೆಪೀರನ ಭವಿಷ್ಯ ನಿಜವಾಗಿತ್ತು. ಹೀಗಾಗಿ ದರ್ಶನ್ ಕುರಿತು ಹೇಳಿರುವ ಭವಿಷ್ಯ ಕೂಡ ನಿಜವಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.