ಬೆಂಗಳೂರು ಗ್ರಾಮಾಂತರ : ಬೆಂಗಳೂರಲ್ಲಿ ಪುಂಡರ ದಾಂಧಲೆ ಹೆಚ್ಚಾಗಿದೆ. ಬೈಕ್ ನಂಬರ್ ಪ್ಲೇಟ್ ಕಳಚಿ, ಹೆಲ್ಮೇಟ್ ಇಲ್ಲದೆ ರಸ್ತೆಗಿಳಿದು ಯುವಕರು ವಿಲೀಂಗ್ ಮಾಡಿರುವ ಘಟನೆ ದೇವನಹಳ್ಳಿ, ದೊಡ್ಡಬಳ್ಳಾಪುರ ಭಾಗದಲ್ಲಿ ನಡೆದಿದೆ.
ಗುಂಪು ಗುಂಪಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ವೀಲಿಂಗ್ ಮಾಡಿದ್ದಾರೆ. ಹೆದ್ದಾರಿಗಳಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದ್ದು, ಕಾಲೇಜು ಹುಡುಗಿಯರನ್ನ ಆಕರ್ಷಿಸಲು ಕಿಡಿಗೇಡಿಗಳು ವೀಲಿಂಗ್ ಮಾಡಿದ್ದಾರೆ.

ಹನ್ನೊಂದು ಮಂದಿ ಗುಂಪಾಗಿ ಬಂದು ದೇವನಹಳ್ಳಿಯಿಂದ ದಾಬಸಪೇಟೆ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿದ್ದು, ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಫೆರಿಫರೆಲ್ ರಿಂಗ್ ರಸ್ತೆ ಯೋಜನೆಯ ಭೂ ಸಂತ್ರಸ್ತರಿಂದ BDA ಕಛೇರಿಗೆ ಮುತ್ತಿಗೆಗೆ ಯತ್ನ | ಪರಿಹಾರಕ್ಕಾಗಿ ಸರ್ಕಾರಕ್ಕೆ ಆಗ್ರಹ



















