ಬೆಂಗಳೂರು: ಇದು ಎಲ್ಲವೂ ಆನ್ ಲೈನ್ ನಲ್ಲಿಯೇ ದೊರೆಯುವ ಕಾಲ. ಮನೆಗೆ ಬೇಕಾಗುವ ಒಂದು ಸಣ್ಣ ಹಾಲಿನ ಪ್ಯಾಕೇಟ್ ನಿಂದ ಹಿಡಿದು ದೊಡ್ಡ ಫ್ರಿಡ್ಜ್ ವರೆಗೆ ಎಲ್ಲವನ್ನೂ ಆನ್ ಲೈನ್ ನಲ್ಲಿಯೇ ಬುಕ್ ಮಾಡಬಹುದು. ಬ್ಯಾಂಕಿಂಗ್ ಕೂಡ ಆನ್ ಲೈನ್ ಆಗಿದೆ. ಅದರಲ್ಲೂ, ಬ್ಯಾಂಕುಗಳು ವಾಟ್ಸ್ ಆ್ಯಪ್ ಮೂಲಕವೂ ಹಲವು ಸೇವೆಗಳನ್ನು ಒದಗಿಸುತ್ತಿವೆ. ವಾಟ್ಸ್ ಆ್ಯಪ್ ನಲ್ಲಿ ಚಾಟ್ ಮಾಡುವ ಮೂಲಕವೂ ಈಗ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ.
ಹೌದು, ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ಮಾಹಿತಿ, ಮಿನಿ ಸ್ಟೇಟ್ ಮೆಂಟ್, ಲೋನ್ ಆಫರ್ ಸೇರಿ ಹಲವು ಸೇವೆಗಳನ್ನು ವಾಟ್ಸ್ ಆ್ಯಪ್ ಮೂಲಕವೇ ಬ್ಯಾಂಕ್ ಗಳು ನೀಡುತ್ತಿವೆ. ಅಂತಹ ಬ್ಯಾಂಕ್ ಗಳ ನಂಬರ್ ಗಳನ್ನು ಇಲ್ಲಿ ನೀಡಲಾಗಿದೆ. ನೀವು ಈ ನಂಬರ್ ಗಳಿಗೆ Hi ಅಂತ ಮೆಸೇಜ್ ಮಾಡುವ ಮೂಲಕ ಸೇವೆಗಳನ್ನು ಪಡೆಯಬಹುದಾಗಿದೆ. ಇವು ಬ್ಯಾಂಕ್ ಗಳು ನೀಡಿದ ಅಧಿಕೃತ ನಂಬರ್ ಗಳಾಗಿವೆ. ಬೇರೆ ನಕಲಿ ನಂಬರ್ ಗಳ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು.
ಬ್ಯಾಂಕ್ ಗಳು ಹಾಗೂ ನಂಬರ್ ಗಳು
ಭಾರತೀಯ ಸ್ಟೇಟ್ ಬ್ಯಾಂಕ್ (SBI) +91 90226 90226
ಎಚ್ ಡಿ ಎಫ್ ಸಿ +91 70700 22222
ಐಸಿಐಸಿಐ +91 86400 86400
ಆಕ್ಸಿಸ್ +91 70361 65000
ಬ್ಯಾಂಕ್ ಆಫ್ ಬರೋಡಾ +91 84338 88777
ಪಂಜಾಬ್ ನ್ಯಾಷನಲ್ ಬ್ಯಾಂಕ್ +91 92640 92640
ಕೆನರಾ ಬ್ಯಾಂಕ್ +91 90760 30001
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ +91 96666 06060
ಬ್ಯಾಂಕ್ ಆಫ್ ಇಂಡಿಯಾ +91 83760 06006
ಇಂಡಿಯನ್ ಬ್ಯಾಂಕ್ +91 87544 24242
ಕೋಟಕ್ ಮಹೀಂದ್ರಾ ಬ್ಯಾಂಕ್ +91 22 6600 6022
ಯೆಸ್ ಬ್ಯಾಂಕ್ +91 82912 01200
ಐಡಿಎಫ್ ಸಿ ಫಸ್ಟ್ ಬ್ಯಾಂಕ್ +91 95555 55555
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ +91 99809 71256
ಇದನ್ನೂ ಓದಿ: ಐಫೋನ್ ಪ್ರಿಯರಿಗೆ ಬಂಪರ್ ಸುದ್ದಿ : ಅರ್ಧ ಬೆಲೆಗೆ ಸಿಗಲಿದೆ ‘ಐಫೋನ್ ಏರ್



















