ನಟ ಧನುಷ್ 50ನೇ ಸಿನಿಮಾ ‘ರಾಯನ್’ ಮೇಲೆ ಎಲ್ಲರ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಡಬಲ್ ಮಾಡುವ ರೀತಿಯಲ್ಲಿ ಈಗ ಟ್ರೇಲರ್ ಬಿಡುಗಡೆ ಆಗಿದೆ. ಸ್ವತಃ ಧನುಷ್ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಕುತೂಹಲ ಹೆಚ್ಚಾಗಿದೆ.
ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಿರೀಕ್ಷೆ ಹೆಚ್ಚಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಿದೆ. ‘ರಾಯನ್’ ಸಿನಿಮಾದಲ್ಲಿ ಧನುಷ್ ಅವರಿಗೆ ಸಂಪೂರ್ಣ ಮಾಸ್ ಅವತಾರ ಇರಲಿದೆ ಎಂಬುವುದಕ್ಕೆ ಟ್ರೇಲರ್ ಹೇಳುತ್ತಿದೆ.
50ನೇ ಸಿನಿಮಾ ಆದ್ದರಿಂದ ಧನುಷ್ ಅವರು ತುಂಬ ಕಾಳಜಿ ವಹಿಸಿ ‘ರಾಯನ್’ ಚಿತ್ರದಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಎಸ್.ಜೆ. ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಮುಗ್ಧ ಬಾಲಕನೊಬ್ಬ ಕ್ರೂರಿಯಾಗಿ ಬದಲಾಗುವ ಕಹಾನಿ ‘ರಾಯನ್’ ಸಿನಿಮಾದಲ್ಲಿ ಇದೆ ಎನ್ನಲಾಗುತ್ತಿದೆ. ಜುಲೈ 26ರಂದು ‘ರಾಯನ್’ ಬಿಡುಗಡೆ ಆಗಲಿದೆ. ಈ ಚಿತ್ರ ತಮಿಳು, ತೆಲುಗು, ಹಿಂದಿ ವರ್ಷನ್ನಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಓಂ ಪ್ರಕಾಶ್ ಛಾಯಾಗ್ರಹಣ, ಎ.ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗೆ ಇದೆ. ‘ರಾಯನ್’ ಸಿನಿಮಾ ಮೂಲಕ ಗೆಲ್ಲುವ ಸೂಚನೆಯನ್ನು ಧನುಷ್ ನೀಡಿದ್ದಾರೆ. ಅಭಿಮಾನಿಗಳಂತೂ ಈಗ ಭಾರೀ ಖುಷಿಯಾಗಿದ್ದಾರೆ.