ನಟಿ ರಾಧಿಕಾ ಕುಮಾರಸ್ವಾಮಿ ನಟಿಸಿರುವ ‘ಭೈರಾದೇವಿ’ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದ್ದು, ಸದ್ಯ ನಟಿ ಆ ಚಿತ್ರದ ಕುರಿತು ಅಪ್ಡೇಟ್ ನೀಡಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಸಿನಿಮಾದ ಟ್ರೈಲರ್ ಕೂಡ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕಾಳಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಕಾಳಿ ವೇಷ ಧರಿಸಿದಾಗ ಅವರ ದೇಹದಲ್ಲಿ ಆಗುತ್ತಿದ್ದ ಬದಲಾವಣೆ ಕುರಿತು ಮಾತನಾಡಿದ್ದಾರೆ.
ನಾನು ಕಾಳಿ ವೇಷ ಧರಿಸಿದಾಗ ಕೆಲವು ಬದಲಾವಣೆ ಆಗುತ್ತಿದ್ದವು. ಕಾಳಿ ವೇಷ ಧರಿಸಿದಾಗ ಮೊದಲ ದಿನ ತಲೆ ಸಹ ಎತ್ತಲು ನನಗೆ ಆಗಲಿಲ್ಲ. ಆ ನಂತರ ನಮ್ಮ ಕೋರಿಯೋಗ್ರಫರ್ ಹಾಗೂ ನಿರ್ದೇಶಕರು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೃಷ್ಟಿ ತೆಗೆದರು. ಅದಾದ ನಂತರ ನನಗೆ ನಟಿಸಲು ಸಾಧ್ಯ ಆಯಿತು ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ರಾಧಿಕಾ ಜೊತೆಗೆ ನಟ ರಮೇಶ್ ಅರವಿಂದ್ ಸಹ ನಟಿಸಿದ್ದಾರೆ. ರಮೇಶ್ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅತೀಂದ್ರಿಯ ಶಕ್ತಿ, ದೇವರು-ದುಷ್ಟ ಶಕ್ತಿ ನಡುವಿನ ಯುದ್ಧವಿದೆ.