ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಅವರೊಂದಿಗೆ ಒಟ್ಟು 17 ಜನ ಆರೋಪಿಗಳು ಈಗ ಜೈಲಿನಲ್ಲಿ ಮುದ್ದೆ ತಿನ್ನುತ್ತಿದ್ದಾರೆ. ಈ ಮಧ್ಯೆ ಈಗ ದರ್ಶನ್ ಮನೆಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ರಿಟ್ರೀವ್ ಮಾಡಲಾಗಿದ್ದು, ಢವಢವ ಶುರುವಾಗಿದೆ.
ಈಗಾಗಲೇ ಪೊಲೀಸರು ಪ್ರಕರಣದ ತನಿಖೆಯನ್ನು ಹಲವಾರು ಆಯಾಮಗಳಲ್ಲಿ ಆರಂಭಿಸಿದ್ದಾರೆ. ಸಾಕಷ್ಟು ಸಾಕ್ಷ್ಯಗಳು ಈಗ ಪೊಲೀಸರಿಗೆ ಸಿಕ್ಕಿವೆ. ಹೀಗಾಗಿ ನಟ ದರ್ಶನ್ ಗೆ ಈ ಪ್ರಕರಣದಲ್ಲಿ ಸಂಕಷ್ಟ ಹೆಚ್ಚಾಗುತ್ತಲೇ ಇದೆ. ಈಗ ಪೊಲೀಸರು ಮನೆಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಇದರಲ್ಲಿ ಶಾಕಿಂಗ್ ವಿಚಾರಗಳು ಬಯಲಾಗಿದ್ದು, ದರ್ಶನ್ ಗೆ ಆತಂಕ ಶುರುವಾಗಿದೆ.
ಆರೋಪಿಗಳು ಕೊಲೆ ನಡೆದ ನಂತರ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದರು. ದರ್ಶನ್ ಮನೆಯ ಸಿಸಿಟಿವಿ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಸಿಐಡಿ ಸೈಬರ್ ತಜ್ಞರಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಈಗ ರಿಟ್ರೀವ್ ಮಾಡಲಾಗಿದೆ. ಈ ದೃಶ್ಯಗಳಲ್ಲಿ ಆರೋಪಿಗಳ ಚಲನವಲನಗಳು ದಾಖಲಾಗಿವೆ ಎನ್ನಲಾಗುತ್ತಿದೆ.
ರಿಟ್ರೀವ್ ಮಾಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೊಲೆ ನಡೆದ ದಿನ ದರ್ಶನ್ ಸೇರಿ ಆರೋಪಿಗಳು ಹೊರಗೆ ಬಂದು ಹೋಗಿರುವುದು ಪತ್ತೆಯಾಗಿದೆ. ಜೂನ್ 8 ರಿಂದ ಜೂನ್ 10ರವರೆಗೆ ಕೊಲೆಯ ಆರೋಪಿಗಳ ಚಲನವಲನ ಈ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳು ಮಾತ್ರವಲ್ಲದೆ ಕೃತ್ಯಕ್ಕೆ ಬಳಸಿದ್ದ ವಾಹನಗಳ ಓಡಾಟ ಕೂಡ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ವಿಡಿಯೋ ರಿಟ್ರೀವ್ ಮಾಡಿ ಪಂಚನಾಮೆ ಮಾಡಿದ್ದಾರೆ.
ದರ್ಶನ್ ಸ್ನೇಹಿತನ ವಿಚಾರಣೆಯನ್ನು ಕೂಡ ಈಗ ಪೊಲೀಸರು ನಡೆಸಿದ್ದಾರೆ. ಹೀಗಾಗಿ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಎಲ್ಲರಿಗೂ ಭಯ ಶುರುವಾಗಿದೆ.