ಬೆಂಗಳೂರು: ಕನ್ನಡದ ಪ್ರತಿಭಾವಂತ ನಟಿಯರಲ್ಲಿ ನಟಿ ಅದಿತಿ ಪ್ರಭುದೇವ ಕೂಡ ಒಬ್ಬರು. ನಟಿಸಿದ್ದು ಕೆಲವು ಸಿನಿಮಾಗಳಾದರೂ ಜನರು ಮಾತ್ರ ಅವರನ್ನು ಒಪ್ಪಿಕೊಂಡಿದ್ದಾರೆ.
ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ದಂಪತಿಯ ಮುದ್ದಿನ ಮಗಳು ನೇಸರಳ ಮೊದಲ ವರ್ಷದ ಹುಟ್ಟು ಹಬ್ಬ ಅದ್ದೂರಿಯಾಗಿ ನಡೆಯಿತು. ನೇಸರಳ ಬರ್ತಡೇ ಪಾರ್ಟಿಯಲ್ಲಿ ಸಾಕಷ್ಟು ಜನ ನಟ- ನಟಿಯರು ಪಾಲ್ಗೊಂಡಿದ್ದರು. ನಟಿ ಅದಿತಿ ಪ್ರಭುದೇವ ತನ್ನದೇ ಆದಂತಹ ಸಪರೇಟ್ ಫ್ಯಾನ್ಸ್ ಗಳನ್ನು ಹೊಂದಿದ್ದು, ಕನ್ನಡ ಚಿತ್ರರಂಗದಲ್ಲಿ ಯಾವುದೇ ರಿಮಾರ್ಕ್ ಇಲ್ಲದ ನಟಿಯಾಗಿದ್ದಾರೆ.
ಇನ್ನು ಬಟರ್ ಫ್ಲೈ ಥೀಮ್ಮಲ್ಲಿ ಮಗಳ ಬರ್ತ್ ಡೇಗೆ ಕೇಕ್ ರೆಡಿ ಮಾಡಿ, ಕಟ್ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೇಸರಾಳಿಗೆ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ.