ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯ ಘಟ್ಟವಾಗಿರುತ್ತದೆ. ಜೀವನದಲ್ಲಿ ಅದೇನೆ ಸಾಧನೆ ಮಾಡಿದರು ಕೂಡ ಮದುವೆಯ ಬಂಧ ಬೆಸೆಯಲೇಬೇಕು. ಸುಖ- ದುಃಖ ನೆಮ್ಮದಿ ಏನೇ ಇರಲಿ ಹಂಚಿಕೊಳ್ಳಲು ಬಾಳ ಸಂಗಾತಿಯ ಅಗತ್ಯ ಇದೆ. ಹಾಗಾದರೆ, ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲು ಸರಳ ಟಿಪ್ಸ್ ಗಳನ್ನು ನೋಡೋಣ.
ಉತ್ತಮ ಜೀವನ ಸಂಗಾತಿಯ ಆಯ್ಕೆ!
ನಮ್ಮ ಜೀವನದ ಏರುಪೇರುಗಳನ್ನು ಹಂಚಿಕೊಳ್ಳಲು ಯಾವತ್ತೂ ನಾವು ಒಂದು ಸಂಗಾತಿಯನ್ನು ಬಯಸುತ್ತೇವೆ. ಅದು ಹುಡುಗ ಆಗಿರಲಿ, ಹುಡುಗಿ ಆಗಿರಲಿ ಒಬ್ಬಂಟಿಯಾಗಿ ಜೀವನ ಕಳೆಯೋಕೆ ಕಷ್ಟಸಾಧ್ಯ. ಹೀಗಾಗಿ ಜೀವನ ಸಂಗಾತಿಯ ಆಯ್ಕೆ ಮಾಡುವುದರಲ್ಲಿ ನಾವು ಬಹಳ ಯೋಚನೆ ಮಾಡಬೇಕು. ನಮ್ಮ ಭಾವನೆಗಳಿಗೆ ಸ್ಪಂದಿಸುವ ಹೃದಯವನ್ನು ನಾವು ಆಯ್ಕೆ ಮಾಡಿ ಕೊಳ್ಳುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಯಾಕೆಂದರೆ ಮನುಷ್ಯನ ಮನಸ್ಸು ಯಾವಾಗ ಯಾವ ರೀತಿಯಾಗಿ ಬದಲಾಗುತ್ತೆ ಎನ್ನುವುದು ತಿಳಿಯಲು ಸಾಧ್ಯವಿಲ್ಲ. ಹೀಗಾಗಿ, ನೆಮ್ಮದಿಯ ಜೀವನಕ್ಕಾಗಿ ಉತ್ತಮವಾದ ಸಂಗಾತಿಯ ಆಯ್ಕೆ ಮಾಡುವುದು ಒಳ್ಳೆಯದು.

ಮುಕ್ತವಾದ ಮಾತುಕತೆ ಇರಲಿ!
ಮಾತು ಎನ್ನುವುದು ಸಂಬಂಧಗಳನ್ನು ಮುರಿಯುತ್ತೆ. ಜೊತೆಗೆ ಸಂಬಂಧಗಳನ್ನು ಒಗ್ಗೂಡಿಸುತ್ತೆ. ಅಷ್ಟೊಂದು ಮೌಲ್ಯ ಮಾತಿಗಿದೆ. ಬಾಳ ಸಂಗಾತಿಯ ಜೊತೆಗೆ ಓಪನ್ ಆಗಿ ಅಥವಾ ಮುಕ್ತವಾಗಿ ಮಾತನಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ ಇಲ್ಲವಾದಲ್ಲಿ ಸಾಕಷ್ಟು ಅನುಮಾನ ಅಥವಾ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಇರುವಂತಹ ಸಾಧ್ಯತೆ. ಹೀಗಾಗಿ ಯಾವುದೇ ವಿಚಾರವನ್ನು ತನ್ನ ಸಂಗಾತಿಯ ಜೊತೆಗೆ ಮುಕ್ತವಾಗಿ ಹಂಚಿಕೊಂಡರೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂಗತಿಗಳು ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಇಂದು ನಾವು ಬದುಕುತ್ತಿರುವ ಜಗತ್ತಿನಲ್ಲಿ ಡಿವೋರ್ಸ್ ಕೇಸ್ ಗಳೆ ಹೆಚ್ಚಾಗಿದ್ದು, ಗಂಡ ಹೆಂಡತಿ ಮದುವೆಯ ನಂತರ ಕೆಲವು ತಿಂಗಳ ನಂತರ ದೂರವಾಗುವಂತಹ ನಿದರ್ಶನಗಳು ಹೆಚ್ಚಾಗಿದೆ.
ಪ್ರೀತಿ ಕೊಟ್ಟು ಪ್ರೀತಿ ಪಡೆಯಿರಿ!
ನಮ್ಮ ಜೀವನದಲ್ಲಿ ಪ್ರೀತಿ ಎನ್ನುವುದು ಬಹಳ ಮುಖ್ಯ ಇದನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಹಾಗೆಯೇ ಕ್ಷಣಾರ್ಧದಲ್ಲಿ ಪ್ರೀತಿಯನ್ನು ಕಳೆದುಕೊಳ್ಳಬಹುದು. ನಾವು ನಮ್ಮ ಬಾಳ ಸಂಗಾತಿಗೆ ಪ್ರೀತಿಯ ದಾರೆ ಎರೆದರೆ, ಅದೇ ರೀತಿಯಾದಂತಹ ಪ್ರೀತಿ ಖಂಡಿತವಾಗಲೂ ನಮಗೆ ಲಭಿಸುತ್ತದೆ. ಪ್ರತಿ ಬಾರಿ ಬಾಳಸಂಗಾತಿಗೆ ಬಯ್ಯೋದು ಅಥವಾ ಅವಾಚ್ಯ ಶಬ್ಧಗಳಿಂದ ನಿಂದಿಸಿದರೆ ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.