ಒಬ್ಬ ಮಹಿಳೆಗೆ ತಾಯ್ತನ ಅನ್ನೋದು ತುಂಬಾ ಮುಖ್ಯವಾಗಿರುತ್ತದೆ. ಆಕೆ ಗರ್ಭಿಣಿಯಾದಾಗ ತುಂಬಾ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಆದಷ್ಟು ಹೆಚ್ಚೆಚ್ಚು ಪ್ರೋಟೀನ್‌ಯುಕ್ತ ಆಹಾರ ಸೇವಿಸಬೇಕು. ಜೊತೆಗೆ ಹೀಟ್ ಪದಾರ್ಥಗಳನ್ನು ಅಲ್ಲದೇ, ಕೆಲವೊಂದು ಭಾರಿ ನಾವು ತಿಳಿದೋ? ತಿಳಿಯದೆಯೋ?ಮಾಡುವಂತಹ ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಮಗುವಿನ ಬೆಳವಣಿಗೆಗೂ ಕೂಡ ತುಂಬಾ ತೊದರೆಯಾಗುತ್ತೆ. ಇಂತಹ ಸಮಯದಲ್ಲಿ ಕೆಲವು ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದರಿಂದ ಬ್ಯೂಟಿ ಪಾರ್ಲರ್ ಗಳ ಮೊರೆ ಹೋಗುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ.
ಹಾಗಾದರೆ, ಪಾರ್ಲರ್ ಗಳಲ್ಲಿ ಯಾವ ರೀತಿಯ ಸರ್ವಿಸ್ ಗಳನ್ನು ಮಾಡಿಸಿಕೊಳ್ಳಬೇಕು ಯಾವುದನ್ನು ಮಾಡಿಸಿಕೊಳ್ಳಬಾರದು ಎಂಬುವುದನ್ನು ತಿಳಿಯೋಣ ಬನ್ನಿ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತಿವೆ. ಹೀಗಾಗಿ ಅದನ್ನು ಮರೆಮಾಚಲು ಕೂದಲಿಗೆ ಕಲರಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಇದು ಒಳ್ಳೆಯದಲ್ಲ. ಏಕೆಂದರೆ ಗರ್ಭಿಣಿಯರಿಗೆ ಹಾರ್ಮೋನ್ ಬದಲಾವಣೆಗಳಾಗುವುದು ಸಾಮಾನ್ಯ. ಇಂತಹ ಸಮಯದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ರಾಸಾಯನಿಕಗಳನ್ನು ಒಳಗೊಂಡಿರುವ ಬಣ್ಣಗಳು ದೇಹಕ್ಕೆ ಸರಿ ಹೊಂದದೆಯೂ ಇರಬಹುದು.
ಇನ್ನು ವ್ಯಾಕ್ಸಿಂಗ್ ವಿಚಾರಕ್ಕೆ ಬಂದದರೆ, ಗರ್ಭಾವಸ್ಥೆಯಲ್ಲಿ ವ್ಯಾಕ್ಸಿಂಗ್ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದು ಹೆಚ್ಚಿನ ನೋವನ್ನು ಉಂಟು ಮಾಡುತ್ತದೆ ಜೊತೆಗೆ ಈ ಸಮಯದಲ್ಲಿ ಕೆಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಸಮಯದಲ್ಲಿ ವ್ಯಾಕ್ಸಿಂಗ್ ಮಾಡುವುದನ್ನು ತಪ್ಪಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.