ಸಿದ್ದರಾಮಯ್ಯ ದಾಖಲೆ ಮುರಿಯಲು ಮುಖ್ಯಮಂತ್ರಿ ಆಗಿದ್ದಾರೆ. ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳೋದು ಸರಿಯಲ್ಲ ಅರಸು ಅವರ ಯಾವ ಗುಣ ಸಿದ್ದರಾಮಯ್ಯ ಬಳಿ ಇದೆ ಅಂತ ಹೇಳಲಿ. ಒಂದು ದಾಖಲೆಗಾಗಿ ಸಿಎಂ ಆಗಿದ್ದಾರಾ? ಎಂದು ಕಿಡಿಕಾರಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ದಾಖಲೆ ಮುಖ್ಯ ಅಲ್ಲ, ಅವರೇನು ಕೆಲಸ ಮಾಡಿದ್ದಾರೆ ಅನ್ನೋದು ಮುಖ್ಯ. ಸಿದ್ದರಾಮಯ್ಯ ಅವರನ್ನು ಯಾರೂ ಅರಸು ಅವರಿಗೆ ಹೋಲಿಸಲು ಇಷ್ಟ ಪಡಲ್ಲ. ಅವರ ಪಕ್ಷದಲ್ಲೇ ಯಾರೂ ಹಾಗೆ ಮಾತಾಡಿಲ್ಲ. ಅವರು ದಾಖಲೆ ಮಾಡ್ತಿರೋದು ಅವರ ವೈಯಕ್ತಿಕ ತೃಪ್ತಿಗಾಗಿ ಅಷ್ಟೇ. ವಿಬಿಜಿ ರಾಮ್ ಜಿ ವಿರುದ್ಧದ ಕಾಂಗ್ರೆಸ್ ಅಭಿಯಾನಕ್ಕೆ ಖಂಡನೆ. ವಿಬಿಜಿ ರಾಮ್ ಜಿ ಕಾಯ್ದೆ ಬಗ್ಗೆ ತಪ್ಪು ಸಂದೇಶ ಕೊಡ್ತಿದೆ ಕಾಂಗ್ರೆಸ್ ಎಂದು ಆಕ್ರೋಶಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಸುಳ್ಳು ಸೃಷ್ಟಿಸುವ ಕೈಗಾರಿಕೆ ಇದೆ. ಸುಳ್ಳು ಸೃಷ್ಟಿಸಿ ಪ್ರಸಾರ ಮಾಡ್ತಿದೆ. ಮನ್ರೇಗಾ ಯೋಜನೆ ಕೂಲಿ ಕೆಲಸಕ್ಕೆ ಅಂತ ಕಲ್ಪನೆ ಇಟ್ಕೊಂಡು ಮಾಡಿದ್ರು. ಈಗ ಎರಡು ವಿಚಾರ ಇದೆ, ಪರಿಸ್ಥಿತಿ ಬದಲಾಗಿದೆ, ಜನರಿಗೆ ಕೆಲಸ ಕೊಡೋದ್ರ ಜತೆಗೆ ವಿಕಸಿತ ಗ್ರಾಮ ಮಾಡುವ ಉದ್ದೇಶ ಇದೆ ಕಿಡಿಕಾರಿದ್ದಾರೆ.
ಬಾಳಿಕೆ ಬರುವ ಮೂಲಸೌಕರ್ಯ ಸೃಷ್ಟಿಸುವ ಉದ್ದೇಶ ಇದೆ. ಆ ಕಾರಣದಿಂದ ಯೋಜನೆ ಬದಲಾಗಿದೆ, ಸ್ಥಳೀಯ ಮೂಲಸೌಕರ್ಯದ ಪರಿಕಲ್ಪನೆ ಬದಲಾಗಿದೆ, ಆ ನಿಟ್ಟಿನಲ್ಲಿ ಯೋಜನೆ ಬದಲಾಯಿಸಲಾಗಿದೆ. ಹಿಂದೆ ಮನ್ರೇಗಾದಲ್ಲಿ ದೊಡ್ಡ ಪ್ರಮಾಣದ ಸೋರಿಕೆ ಇತ್ತು, ನಕಲಿ ಜಾಬ್ ಕಾರ್ಡ್ ಸೃಷ್ಟಿಸಲಾಗ್ತಿತ್ತು. ವಿಬಿಜಿ ರಾಮ್ ಜಿ ಯೋಜನೆಯಲ್ಲಿ ನಕಲಿ ಮಾಡಲು ಅಸಾಧ್ಯ, ಭ್ರಷ್ಟಾಚಾರ ಅಸಾಧ್ಯ. ಇದು ಕಾಂಗ್ರೆಸ್ ನವ್ರಿಗೆ ಇಷ್ಟ ಇಲ್ಲ. ಹಿಂದೆ ಇದ್ದಿದ್ದಕ್ಕಿಂತ 17 ಸಾವಿರ ಕೋಟಿ ರೂ ಹೆಚ್ಚು ಅನುದಾನ ಈ ಯೋಜನೆಯಡಿ ಈಗ ರಾಜ್ಯಗಳಿಗೆ ಕೊಡ್ತೇವೆ. ಭ್ರಷ್ಟಾಚಾರದ ಮೂಲ ಪಕ್ಷ ಕಾಂಗ್ರೆಸ್ ಈ ಯೋಜನೆಗೆ ವಿರೋಧ ಮಾಡ್ತಿದೆ ಎಂದು ವಾಗ್ಬಾಣ ಬಿಟ್ಟಿದ್ದಾರೆ.
ಅರಸು ದಾಖಲೆ ಬ್ರೇಕ್ ಆಗಲಿರುವ ವಿಚಾರ, ಪ್ರಲ್ಹಾದ್ ಜೋಷಿ ಟೀಕೆ:
ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಗೆ ಸಿಎಂ ಆಗಿರೋದಕ್ಕೆ ನಮಗೇನೂ ಬೇಸರ ಇಲ್ಲ. ಆದ್ರೆ ರಾಜ್ಯದ ಜನಕ್ಕೆ ಇದು ಸಂತೋಷ ತರಬೇಕಿತ್ತು, ಜನಕ್ಕೆ ಸಂತೋಷ ಆಗಿಲ್ಲ. ಅತೀ ಹೆಚ್ಚು ಅವಧಿಯ ಸಿಎಂ ಆಗಿದ್ದಾರೆ ಹೊರತು, ಅವರ ಅವಧಿಯಲ್ಲಿ ಅಭಿವೃದ್ಧಿ, ಸಾಧನೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಹೈಡ್ರಾಮಾ | ಸಚಿವ ಸೋಮಣ್ಣರತ್ತ ಕುರ್ಚಿ ಎಸೆದ ‘ಕೈ’ ಕಾರ್ಯಕರ್ತರು !



















