‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆಯಾಗಿ ಜನರ ಮನ ಗೆದ್ದಿದೆ. ನಿರ್ದೇಶಕ ನಾಗ್ ಅಶ್ವಿನ್ ಎರಡನೇ ಭಾಗದ ಶೂಟಿಂಗ್ ಗೆ ತಯಾರಿ ನಡೆಸಿದ್ದು, ಮೇ ತಿಂಗಳಲ್ಲಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಈಗ ಅಮಿತಾಭ್ ಬಚ್ಚನ್, ‘ಕೌನ್ ಬನೇಗಾ ಕರೋಡ್ ಪತಿ’ ಎಪಿಸೋಡ್ ನಡೆಸಿಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿರುವುದರಿಂದ ಒಂದೇ ಕೆಲಸದ ಮೇಲೆ ಮಾತ್ರ ಗಮನ ಹರಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಕೆಬಿಸಿ ಪೂರ್ಣಗೊಳಿಸಿದ ನಂತರ ಚಿತ್ರದ ಎರಡನೇ ಭಾಗದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ.
‘ಮೇ ತಿಂಗಳಲ್ಲಿ ಸಿನಿಮಾದ ಶೂಟ್ ಆರಂಭ ಆಗಲಿದೆ. ಈ ಬಾರಿ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಗಲಿದೆ. ಜೂನ್ 15ರವರೆಗೆ ಶೂಟ್ ಇರಲಿದೆ’ ಎಂದು ಮೂಲಗಳು ಹೇಳಿವೆ. ಅಮಿತಾಭ್ ಬಚ್ಚನ್ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಹಾಭಾರತದ ‘ಅಶ್ವತ್ಥಾಮ’ನ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಸೀಕ್ವೆಲ್ ನಲ್ಲಿ ಇದೇ ಪಾತ್ರದಲ್ಲಿ ಮುಂದುವರಯಲಿದೆ. ಅವರು ಈ ಬಾರಿ ಮತ್ತಷ್ಟು ಆ್ಯಕ್ಷನ್ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸುಮತಿ (ದೀಪಿಕಾ ಪಡುಕೋಣೆ) ಅಪರಹಣವಾಗಿದೆ. ಆಕೆಯನ್ನು ರಕ್ಷಿಸುವ ಕೆಲಸವನ್ನು ಅಶ್ವತ್ಥಾಮ ಹಾಗೂ ಭೈರವ/ಕರ್ಣ (ಪ್ರಭಾಸ್) ಒಟ್ಟಾಗಿ ಮಾಡಲಿದ್ದಾರೆ. ಇದು ಸೀಕ್ವೆಲ್ನಲ್ಲಿ ಹೆಚ್ಚು ಹೈಲೈಟ್ ಆಗಲಿದೆ.
ಕಮಲ್ ಹಾಸನ್ ಮಾಡಿರುವ ಕಮಾಂಡರ್ ಯಾಸ್ಕಿನ್ ಪಾತ್ರಕ್ಕೆ ಶಕ್ತಿ ಬಂದಿದೆ. ಹೀಗಾಗಿ ಎರಡನೇ ಭಾಗದಲ್ಲಿ ಅವರ ಪಾತ್ರ ಕೂಡ ಹೆಚ್ಚಾಗಿ ಕಾಣಿಸಲಿದೆ. ಹೀಗಾಗಿ ಎರಡನೇ ಭಾಗದ ಬಗ್ಗೆ ಸಿನಿ ರಸಿಕರಲ್ಲಿ ಆಸಕ್ತಿ ಹಾಗೂ ಉತ್ಸಹ ಹೆಚ್ಚಾಗಿದೆ.