ತುಪ್ಪದ ಬೆಡಗಿ ರಾಗಿಣಿಯನ್ನು ತುಂಬಾ ಕೂಲ್ ವ್ಯಕ್ತಿತ್ವದವರು ಎಂದೇ ಚಿತ್ರರಂಗದಲ್ಲಿ ಮಾತನಾಡಿಕೊಳ್ಳುತ್ತಿರುತ್ತಾರೆ. ಅವರು ತೆರೆಯ ಮೇಲೆ ಮಾತ್ರ ಹಾಟ್..ಹಾಟ್..! ಆದರೆ, ತೆರೆಯ ಹಿಂದೆ ತುಂಬಾ ಕೂಲ್ ಕೂಲ್ ಆಗಿರತ್ತಾರೆ ಎಂದೇ ಹೇಳುತ್ತಿರುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ತುಪ್ಪದ ಬೆಡಗಿ ಕೆಂಡಾಮಂಡಲವಾಗಿ, ತಮ್ಮ ಅಭಿಮಾನಿಯ ಕಪಾಳಕ್ಕೆ ಹೊಡೆದು ಬಿಟ್ಟಿದ್ದಾರೆ.
ಅದಕ್ಕೆ ಬಲವಾದ ಕಾರಣ ಇದೆ. ಅಭಿಮಾನಿಯ ಅತಿರೇಕ ತುಪ್ಪದ ಬೆಡಗಿಯನ್ನು ಬಿಸಿ ಮಾಡಿದೆ. ಹೀಗಾಗಿ ಬಲವಂತವಾಗಿ ಮುಟ್ಟಲು ಬಂದ ವ್ಯಕ್ತಿಯೊಬ್ಬನಿಗೆ ರಾಗಿಣಿ ದ್ವಿವೇದಿ ಬಾರಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವರು ಹಲವು ರೀತಿ ಕಮೆಂಟ್ ಮಾಡುತ್ತಿದ್ದಾರೆ. ನಟಿ ಪರ ಹಲವರು ಧ್ವನಿ ಎತ್ತಿದ್ದಾರೆ.
ರಾಗಿಣಿ ದ್ವಿವೇದಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ಅವರನ್ನು ನೋಡಲು ಸಹಜವಾಗಿ ಜನಜಂಗುಳಿ ಉಂಟಾಗಿತ್ತು. ರಾಗಿಣಿ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದು ಫ್ಯಾನ್ಸ್ ಮುಗಿಬಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಅತಿರೇಕದ ವರ್ತನೆ ತೋರಿಸಿ, ರಾಗಿಣಿ ಕೈ ಹಿಡಿದು ಎಳೆದಿದ್ದಾನೆ. ಆಗ ಕೆಂಡಾಮಂಡಲವಾಗಿರುವ ರಾಗಿಣಿ, ವ್ಯಕ್ತಿಗೆ ಹೊಡೆದಿದ್ದಾರೆ.
ರಾಗಿಣಿ ದ್ವಿವೇದಿ ಸಿನಿಮಾಗಳಲ್ಲಿ ಹಾಟ್ ಗೆಟಪ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಾಗಂತ ಅದು ಅವರ ರಿಯಲ್ ಲೈಫ್ ವ್ಯಕ್ತಿತ್ವ ಅಲ್ಲ ಎನ್ನುವುದನ್ನು ಅಭಿಮಾನಿಗಳು ಅರಿತಿರಬೇಕು. .ಏನಂತೀರಿ?