ಬೆಂಗಳೂರು | ಚಿತ್ರರಂಗದಲ್ಲಿ ಮನರಂಜನೆಯ ‘ಫುಲ್ ಮೀಲ್ಸ್’ ಬಡಿಸೋಕೆ ಯುವನಟ ಲಿಖಿತ್ ಶೆಟ್ಟಿ ರೆಡಿಯಾಗಿದ್ದಾರೆ. ಲಿಖಿತ್‌ಗೆ ಖುಷಿರವಿ ಮತ್ತು ತೇಜಸ್ವಿನಿಶರ್ಮ ರುಚಿ ಹೆಚ್ಚಿಸೋಕೆ ಸಾಥ್ ಕೊಟ್ಟಿದ್ದಾರೆ.

ಬಾಳೆ ಎಲೆ ಊಟ ಹಾಕಿ ರಂಜಿಸೋಕೆ ನಾವ್ ಬರ್ತೀವಿ ಅಂತ ನಿರ್ದೇಶಕ ವಿನಾಯಕ್ ಪ್ರಾಮಿಸ್ ಮಾಡಿದ್ದು, ಇದು ಒಂದು ಟ್ರೈ ಆಂಗಲ್ ಪ್ರೇಮಕಥೆನ ಎಂಬ ಕುತೂಹಲವೂ ಜೋರಾಗಿದೆ. ರೋಮ್ಯಾಂಟಿಕ್ ಕಾಮೆಡಿ ಡ್ರಾಮಾ ಥಡ್ಕ ಜೊತೆಗೆ ಫುಲ್ ಮೀಲ್ಸ್ ಸಿನಿಮಾ ನ.21ಕ್ಕೆ ಚಿತ್ರಮಂದಿರಗಳಿಗೆ ಅಪ್ಪಳಿಸ್ತಿದೆ.

ಇದರ ಮಧ್ಯೆಯೇ ಚಿತ್ರದ ಕಂಟೆಂಟ್‌ನಲ್ಲಿ ಛಾಯಾಗ್ರಾಹಕರನ್ನ ಫ್ಲರ್ಟ್ ಎಂದಿರೋದು ಸದ್ಯ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಈ ಸಂಬಂಧ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ಹೋಗಿದೆ. ಛಾಯಾಗ್ರಹಕರನ್ನ ಫ್ಲಟ್ ಎಂದಿರೋದು ಸಂಘದ ಆಕ್ರೋಶಕ್ಕೆ ಕಾರಣವಾಗಿದ್ದು, ಚಿತ್ರದಲ್ಲಿ ಬರುವ ಆಕ್ಷೇಪಾರ್ಹ ಪದಬಳಕೆಯನ್ನು ತೆಗೆಯುವಂತೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಭಾರತದ ಮೇಲೆ ಮತ್ತೊಂದು ‘ಫಿದಾಯಿನ್’ ದಾಳಿಗೆ ಜೈಶ್ ಸಂಚು : ಪ್ರತಿ ಉಗ್ರನಿಗೆ 6,400 ರೂ. ದೇಣಿಗೆಗೆ ಬೇಡಿಕೆ



















