ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ನಕಲಿ ಸಹೋದರಿ ಐಶ್ವರ್ಯ ಗೌಡ (Aishwarya gowda) ವಿರುದ್ಧ ಇಡಿ (Enforcement Directorate) ವಶದಲ್ಲಿದ್ದಾರೆ. ಐಶ್ವರ್ಯಗೌಡ ಜೊತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಹಾಗೂ ಶಿಲ್ಪಾಗೌಡ ನಿವಾಸ ಸೇರಿ 14 ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಹಲವು ದಾಖಲೆಗಳು ಸಿಕ್ಕಿವೆ.
ಶಾಸಕ ವಿನಯ್ ಕುಲಕರ್ಣಿ, ಐಶ್ವರ್ಯಾಗೌಡ ಮಧ್ಯೆ ಇರುವ ನಂಟು ಸ್ಫೋಟವಾಗಿದೆ. ಇಬ್ಬರೂ ಕೋಟ್ಯಾಂತರ ರೂ. ವ್ಯವಹಾರ ಮಾಡಿದ್ದಾರೆ ಎನ್ನಲಾಗಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಹಾಯ ಮಾಡಿದ್ದ ಐಶ್ವರ್ಯಾ, ವಿನಯ್ ಕುಲರ್ಣಿ ಬಳಿ 24 ಕೋಟಿ ರೂ. ಸಾಲ ಪಡೆದು, ದಿನಕ್ಕೆ 24 ಲಕ್ಷ ರೂ. ಬಡ್ಡಿ ಕೊಡುವುದಾಗಿ ಹೇಳಿದ್ದಳು ಎನ್ನಲಾಗಿದೆ.
ಯೋಗೇಶ್ ಗೌಡ ಕೊಲೆ ಕೇಸ್ನಲ್ಲೂ ಶಾಸಕ ವಿನಯ್ ಕುಲರ್ಣಿಗೆ ಸಹಾಯ ಮಾಡಿದ್ದಳು ಎನಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.