ಬೆಂಗಳೂರು: ಚಿನ್ನದ ಬೆಲೆ ಲಕ್ಷದ ಗಡಿಗೆ ಬಂದು ನಿಂತಿದೆ. ಆದರೂ ಏರಿಳಿತ ಮುಂದುವರೆದಿದೆ. ವಾರಾಂತ್ಯದಲ್ಲಿ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ (Gold rate) ಏರಿಕೆಯಾಗುತ್ತಲೇ ಇರುವುದು ಚಿನ್ನದ ಅಭಿಮಾನಿಗಳಿಗೆ ನೋವು ತರುತ್ತಿದೆ.
ಜಾಗತಿಕ ಮಾರುಕಟ್ಟೆಯ ಏರಿಳಿತದಿಂದಾಗಿ ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಏರಿಕೆಯಾಗುತ್ತಿದೆ. ಆಭರಣ ಚಿನ್ನದ ಬೆಲೆ 9,015 ರೂ ಇದ್ದದ್ದು 9,045 ರೂಗೆ ಏರಿದೆ. ಹತ್ತು ದಿನಗಳ ಹಿಂದೆ 8,575 ರೂ ಇದ್ದ ಚಿನ್ನದ ಬೆಲೆಯಲ್ಲಿ 470 ರೂನಷ್ಟು ಏರಿಕೆಯಾಗಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 90,450 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,680 ರೂ. ಇದೆ. 100 ಗ್ರಾಂ ಬೆಳ್ಳಿ ಬೆಲೆ 9,900 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 90,450 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 9,900 ರೂ. ಇದೆ.
ಇಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 90,450 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,680 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,010 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,450 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,680 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ನಾವಿಲ್ಲಿ ನೀಡಿರುವ ದರವೇ ನಿಖರ ಎಂದು ಹೇಳಲು ಆಗುವುದಿಲ್ಲ. ನಾವು ಪ್ರಮುಖ ಚಿನ್ನದ ಅಂಗಡಿಗಳಿಂದ ಬೆಲೆಯ ಬಗ್ಗೆ ಪಡೆದ ಮಾಹಿತಿ ಇದು. ಚಿನ್ನದೊಂದೆಗೆ ಬೇರೆ ಬೇರೆ ಶುಲ್ಕಗಳು ಕೂಡ ಬೀಳಬಹುದು.