ಹುಬ್ಬಳ್ಳಿ: “ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ. ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇದನ್ನು ರಾಜ್ಯದ ಜನ ಮರೆಯಲ್ಲ ಎಂದು ಜೈನ ಗುರು ಗುಣಧರನಂದಿ(Jain Guru Gunadharanandi) ಮಹಾರಾಜರು ಭವಿಷ್ಯ ನುಡಿದಿದ್ದು, ಇದಕ್ಕೆ ಡಿಕೆಶಿ ಬೇಸರದಲ್ಲಿ ಮಾತನಾಡಿದ್ದಾರೆ.
ಇಲ್ಲಿಗೆ ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ನಡೆದ ತೀರ್ಥಂಕರರ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, “ಜೈನ ನಿಗಮ ಮಂಡಳಿ ಸ್ಥಾಪಿಸಿ, ಡಿ.ಕೆ. ಶಿವಕುಮಾರ್(D.K. Shivakumar) ಸಿಎಂ ಆಗುತ್ತಾರೆ. ಇದು ಆಚಾರ್ಯರ ಆಶೀರ್ವಾದ ಹಾಗೂ ಭವಿಷ್ಯವಾಣಿ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ನೀವು ಹೀಗೆ ಪ್ರತಿ ಬಾರಿಯೂ ಆಶೀರ್ವಾದ ನೀಡಿದಾಗಲೂ ನನಗೆ ಪೆಟ್ಟು ಬಿದ್ದಿದೆ ಎಂದು ಮಾರ್ಮಿಕವಾಗಿ ಹಾಗೂ ಬೇಸರದಲ್ಲಿ ಉತ್ತರಿಸಿದ್ದಾರೆ.
ಹಿಂದೆ ವಿನಯ್ ಗುರೂಜಿ ಈ ಮಾತು ಹೇಳಿದ್ದರು. ಈಗ ಗುಣಧರನಂದಿ ಮಹಾರಾಜರು ಆಶೀರ್ವದಿಸಿದ್ದಾರೆ ಎಂದು ಸಂತಸ ಪಟ್ಟಿದ್ದಾರೆ.