ನಟಿ ಉರ್ಫಿ ಜಾವೇದ್ ಒಂದಲ್ಲಾ ಒಂದು ವಿಚಿತ್ರ ಪ್ರಯೋಗ ಮಾಡಿ ಆಗಾಗ ಸದ್ದು ಮಾಡುತ್ತಿದ್ದರು. ಹೀಗಾಗಿ ಆಗಾಗ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು. ಈಗ ಅವರ ಫೋಟೋವೊಂದು ವೈರಲ್ ಆಗಿದ್ದು, ಅದರಲ್ಲಿ ವಿಕಾರವಾಗಿ ಕಾಣಿಸಿಕೊಂಡಿದ್ದಾರೆ.
ಸ್ವತಃ ಉರ್ಫಿ ವಿಡಿಯೋಗಳನ್ನು (Urfi Javed Viral Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚೆನ್ನಾಗಿ ಕಾಣಬೇಕು ಎಂಬ ಆಸೆಯಿಂದ ಉರ್ಫಿ ಜಾವೇದ್ ಅವರು ತುಟಿಗಳಿಗೆ ಫಿಲ್ಲರ್ ಮಾಡಿಸಿಕೊಂಡಿದ್ದರು. ಆದರೆ ಫಿಲ್ಲರ್ ಮಾಡುವ ಪ್ರಕ್ರಿಯೆ ತಪ್ಪಾದ ಕಾರಣ ಅದನ್ನು ತೆಗೆಸುವುದು ಅನಿವಾರ್ಯ ಆಯಿತು. ಫಿಲ್ಲರ್ ತೆಗೆಸಿದ್ದರಿಂದ ಅವರ ತುಟಿಗಳು ಊದಿಕೊಂಡಿವೆ. ಮೊದ ಮೊದಲಿಗೆ ತುಟಿಗಳು ಮಾತ್ರ ಊದಿಕೊಂಡಿದ್ದವು. ಅದರ ವಿಡಿಯೋವನ್ನು ಉರ್ಫಿ ಜಾವೇದ್ ಹಂಚಿಕೊಂಡಿದ್ದರು. ಆದರೆ ನಂತರ ಅವರ ಸಂಪೂರ್ಣ ಮುಖ ದಪ್ಪ ಆಗಿವೆ. ಸದ್ಯ ಅಭಿಮಾನಿಗಳು ಬೇರೆ ಬೇರೆ ರೀತಿಯಾಗಿ ಕಮೆಂಟ್ ಮಾಡುತ್ತಿದ್ದಾರೆ.