ಬೆಂಗಳೂರು: ನಿನ್ನೆ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ, ಸಿಎಂ ಸಿದ್ಧರಾಮಯ್ಯ ಸಚಿವರುಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದರು.
ಆದರೆ, ಜಾತಿಗಣತಿ ವಿಚಾರದಲ್ಲಿ ನಿನ್ನೆ ಸಭೆಯಲ್ಲಿ ಲಿಂಗಾಯತ ಸಮುದಾಯದ ಸಚಿವರುಗಳಾದ ಎಸ್.ಎಸ್.ಮಲ್ಲಿಕಾರ್ಜುನ, ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲ್ ಮಧ್ಯೆ ಮಾತಿನ ಸಮರವೇ ನಡೆದು ಹೋಗಿದೆ. ಇದನ್ನು ಮೀರಿ ಮಾತಿನ ಮಧ್ಯೆ ಪ್ರವೇಶಿಸಿದ ಸಚಿವ ಸಂತೋಷ್ ಲಾಡ್‌ಗೆ ಎಸ್.ಎಸ್. ಮಲ್ಲಿಕಾರ್ಜುನ, ನೀವು ಮಾತನ್ನಾಡುವ ಅವಶ್ಯಕತೆ ಇಲ್ಲ. ನಾವು ಸಿಎಂ ಬಳಿ ಮಾತನ್ನಾಡುತ್ತಿದ್ದೇವೆ.
ನೀವು ಸುಮ್ಮನೆ ಕುಳಿತುಕೊಳ್ಳಿ ಎನ್ನುವ ಮೂಲಕ ಪ್ರಬಲವಾಗಿ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಸಭೆಯಲ್ಲಿ ಇಷ್ಟೆಲ್ಲಾ ಅವಾಂತರಗಳು ನಡೆದರೂ ಹೊರಗೆ ಮಾಧ್ಯಮಗಳ ಮುಂದೆ ಮಾತ್ರ ಸಚಿವರುಗಳು ಹಾಗೂ ಸಿಎಂ ಸಿದ್ಧರಾಮಯ್ಯ ಏನೂ ನಡೆದೇ ಇಲ್ಲ ಎಂಬಂತೆ ಬಿಂಬಿಸಿದ್ದು ವಿಶೇಷವಾಗಿದೆ.