ನಟ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ತೆರೆಗೆ ಅಪ್ಪಳಿಸಿದೆ. ಈ ಚಿತ್ರದಲ್ಲಿ ನಟ ಸುದೀಪ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ರಂಜಿಸಿದ್ದಾರೆ.
ಇದೊಂದು ಪೊಲೀಸ್ ಕಥೆ. ಪ್ರತಿ ಚಿತ್ರದಲ್ಲಿ ಇರುವಂತೆ ಇಲ್ಲಿಯೂ ಪೊಲೀಸ್, ಕಳ್ಳನನ್ನು ಹಿಡಿಯಲು ಹೋಗಲ್ಲ, ಬದಲಾಗಿ ಕಳ್ಳನೇ ಪೊಲೀಸ್ ರನ್ನು ಹಿಡಿಯಲು ಬರುತ್ತಾರೆ. ಕಿಚ್ಚ ಸುದೀಪ್ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರವನ್ನು ಮಾಡಿದ್ದಾರೆ. ಉಗ್ರಂ ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು ಮುಂತಾದವರು ಕೂಡ ಪೊಲೀಸ್ ಪಾತ್ರವನ್ನು ನಿಭಾಯಿಸಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.
ರಾಜಕಾರಣಿಗಳ ಮಕ್ಕಳು ಪೊಲೀಸರ ಮೇಲೆ ಕೈ ಮಾಡುತ್ತಾರೆ. ಅಂತಹ ನಾಯಕರ ಮಕ್ಕಳಿಗೆ ಬುದ್ಧಿ ಕಲಿಸುವುದೇ ಈ ಚಿತ್ರದ ತಿರುಳಾಗಿದೆ. ರಾಜಕಾರಣಿಗಳ ಬಲಿಷ್ಠ ಕೂಟವನ್ನು ಮ್ಯಾಕ್ಸ್ ಹೇಗೆ ಬೇಧಿಸುತ್ತಾನೆ ಎನ್ನುವುದೇ ಚಿತ್ರದ ಸಾರಾಂಶವಾಗಿದೆ.
ಅಲ್ಲಲ್ಲಿ ಟ್ವಿಸ್ಟ್ ಗಳು ಕೂಡ ಚಿತ್ರಕ್ಕೆ ಸಿಕ್ಕಿವೆ. ಆ್ಯಕ್ಷನ್ ಸೀನ್ ಗಳು ಹೆಚ್ಚಾಗಿವೆ. ಈ ಚಿತ್ರದಲ್ಲಿ ಹೀರೋ ಲವ್, ರೊಮ್ಯಾನ್ಸ್, ಕಾಮಿಡಿ ಎಂದು ಹೆಚ್ಚು ಕಾಲಹರಣ ಮಾಡಿಲ್ಲ. ಸುದೀಪ್ ಮ್ಯಾಕ್ಸ್ ತುಂಬ ಆವರಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದೆ. ಶೇಖರ್ ಚಂದ್ರ ಛಾಯಾಗ್ರಹಣ ಚೆನ್ನಾಗಿದೆ.