ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Real Star Upendra), ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ 45 ಸಿನಿಮಾ ಟೀಸರ್ ಬಿಡುಗಡೆಯಾಗಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ(Arjun Janya) ಚೊಚ್ಚಲ ನಿರ್ದೇಶನದ ಸಿನಿಮಾ 45 ಟೀಸರ್ ಯುಗಾದಿ ಹಬ್ಬದ ದಿನದಂದು ನಗರದ ಓರಾಯನ್ ಮಾಲ್ ನಲ್ಲಿ ಅನಾವರಣಗೊಂಡಿತು.
ಶಿವಣ್ಣನ ಲುಕ್, ಉಪ್ಪಿಯ ಖದರ್ ಡೈಲಾಗ್, ರಾಜ್‌ಬಿ ಶೆಟ್ಟಿಯ (Raj B Shetty) ಆ್ಯಕ್ಷನ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಸರ್‌ನಲ್ಲಿ ಹಿನ್ನಲೆ ಧ್ವನಿ ಉತ್ತಮವಾಗಿ ಬಂದಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮನುಷ್ಯ ಸತ್ತ ಮೇಲೆ ತೋರಿಸುವುದು ಪ್ರೀತಿನಾ? ಅವನ ಬದುಕ್ಕಿದ್ದಾಗಲೇ ತೋರಿಸಿ ಎನ್ನೋ ಡೈಲಾಗ್ ಸಖತ್ ಕಿಕ್ ಕೊಡುವಂತಿದೆ ಅಂತಿದ್ದಾರೆ ಫ್ಯಾನ್ಸ್.
ಸೀನ್‌ನಲ್ಲಿ ಉಪ್ಪಿ ಹಾಗೂ ಶ್ವಾನದ ಸೀನ್ ನೋಡಿ ರಿಯಲ್ ಸ್ಟಾರ್ ಫ್ಯಾನ್ಸ್ ಬೆಚ್ಚಿ ಬಿದ್ದಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ತೆರೆಗೆ ಬರಲಿದೆ. ಶಿವಣ್ಣನಿಗೆ ರಿಯಲ್ ಸ್ಟಾರ್ ಉಪೇಂದ್ರ ಜೋಡಿ ಆಗಿದ್ದಾರೆ. ರಾಜ್ ಬಿ ಶೆಟ್ಟಿ ಇದ್ದಾರೆ.