ಬೆಂಗಳೂರು: ರಾಜ್ಯದಲ್ಲಿ ಹೃದಯಘಾತದ ಪ್ರಕರಣ ಹೆಚ್ಚಳವಾಗುತ್ತಿದ್ದು, ಇಂದು ಅಥವಾ ನಾಳೆಯೊಳಗೆ ಹೃದಯಘಾತದ ಕುರಿತು ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ತಜ್ಞರ ತಂಡ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಹೀಗಾಗಿ ಸರ್ಕಾರಕ್ಕೆ ತಜ್ಞರ ಸಲಹೆ ಏನು? ಹೃದಯಘಾತದ ಸಾವು ನಿಯಂತ್ರಣಕ್ಕೆ ತಜ್ಞರು ಏನು ಸಲಹೆ ನೀಡಿದ್ದಾರೆ? ಸರ್ಕಾರಕ್ಕೆ ಸಲ್ಲಿಕೆಯಾಗುವ ವರದಿಯಲ್ಲಿ ಏನಿದೆ? ಎಂಬ ಕುರಿತು ಜನರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಕೊವಿಡ್ ಬಂದು ಹೋದ ಮೂರು ವರ್ಷದ ಬಳಿಕ ಹೃದಯ ಸಮಸ್ಯೆ ಕಂಡು ಬರುತ್ತಿವೆ. ನಿದ್ರಾಹೀನತೆ, ಸುಸ್ತು, ಉಸಿರಾಟದ ಸಮಸ್ಯೆ, ಅತಿಯಾದ ಬೊಜ್ಜು, ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಏನೇನು ಸಲಹೆ?
15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಸ್ಕ್ರೀನಿಂಗ್ ಮಾಡುವಂತೆ ಸಲಹೆ
ಎಲ್ಲ ಶಾಲಾ ಮಕ್ಕಳನ್ನು ಹೃದಯದ ತಪಾಷಣೆಗೆ ಒಳಪಡಿಸುವಂತೆ ಸಲಹೆ
ಪಠ್ಯಕ್ರಮದಲ್ಲಿ ಹೃದಯಘಾತದ ವಿಚಾರ ಅಳವಡಿಸುವಂತೆ ಸಲಹೆ
ಕಡ್ಡಾಯ ಸಾರ್ವಜನಿಕ ಧೂಮಪಾನ ಬ್ಯಾನ್ ಮಾಡುವಂತೆ ಸಲಹೆ
ಹೃದಯಾಘಾತ ಹಾಗೂ ಸಮಸ್ಯೆಗಳ ಬಗ್ಗೆ ರಿಜಿಸ್ಟರ್ ಶುರು ಮಾಡಬೇಕು
ಹೃದಯಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡಬೇಕು
ಜಿಲ್ಲಾ ಆಸ್ಪತ್ರೆಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಔಷಧಗಳ ಸಂಗ್ರಹ ಇಟ್ಟು ಕೊಳ್ಳಬೇಕು
ಸ್ಟೆಮಿ ಯೋಜನೆಯನ್ನು ಎಲ್ಲ ತಾಲ್ಲೂಕುಗಳಿಗೆ ವಿಸ್ತರಣೆ ಮಾಡುವಂತೆ ಸಲಹೆ
ತಾಲ್ಲೂಕು ಆಸ್ಪತ್ರೆಗಳಿಗೆ ಕಾರ್ಡಿಯಾಲಜಿಸ್ಟ್ ವೈದ್ಯರ ನೇಮಕ ಮಾಡುವಂತೆ ಸಲಹೆ