ಬೆಂಗಳೂರು: ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜಸ್ಟಿಸ್ ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಚಿತ್ರರಂಗ ಕೂಡ ಮಹಿಳೆಯರಿಗೆ ಸೇಫ್ ಅಲ್ಲ ಅನಿಸಿತ್ತು. ಅಲ್ಲದೇ, ಸೆಲೆಬ್ರಿಟಿಗಳು ಕೂಡ ಕಾಮುಕರು ಎಂಬ ಭಾವ ಜನರಲ್ಲಿ ಮೂಡಿತ್ತು. ಸದ್ಯ ಈ ವಿಚಾರ ಈಗ ಸ್ಯಾಂಡಲ್ ವುಡ್ ನಲ್ಲಿಯೂ ಸದ್ದು ಮಾಡುತ್ತಿದ್ದು, ಹಿರಿಯ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ.
ಯಾವುದೇ ಕ್ಷೇತ್ರವಾಗಲಿ ಆತ್ಮ ಗೌರವಕ್ಕೆ ಧಕ್ಕೆ ಬರಬಾರದು. ಚಿತ್ರರಂಗ ಮಾತ್ರವಲ್ಲ ಯಾವುದೇ ಕ್ಷೇತ್ರವಾದರೂ ಸರಿ. ಸಿನಿಮಾಗಾಗಿ ನಾವೆಲ್ಲ ಕಷ್ಟ ಪಟ್ಟು ಬೆವರು ಸುರಿಸಿ ಕೆಲಸ ಮಾಡುತ್ತೇವೆ. ಸಿನಿಮಾ ಇಮೇಜ್ ಗೆ ಎಲ್ಲೂ ಡ್ಯಾಮೇಜ್ ಆಗಬಾರದು. ಚಿತ್ರರಂಗ ಅನ್ನೋದು ಗ್ರೇಟ್ ಫೀಲ್ಡ್ ಯಾರು ಅನುಮಾನ ಪಡಬೇಡಿ. ಪಡುವಂತಾಗಬಾರದು ಎಂದು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಅನ್ನೋದನ್ನು ಸಿನಿಮಾ ಮೇಲೆ ಹಾಕಬೇಡಿ. ಲೈಂಗಿಕ ಕಿರುಕುಳ ಎಲ್ಲಿ ನಡೆದರೂ ತಪ್ಪು. ಸಿನಿಮಾದಲ್ಲಿ ನಡೆದರೂ ತಪ್ಪು. ಸಿನಿಮಾ ಅನ್ನೋದು ದೊಡ್ಡ ಸಾಗರ. ನಮ್ಮ ಅಟೆನ್ಷನ್ ಇರುವುದು ಕ್ರಿಯೇಟಿವಿಟಿ ಕಡೆಗೆ. ಯಾರಿಗಾದರೂ ಅನ್ಯಾಯ ಆಗಿದ್ದರೆ ಖಂಡಿತಾ ನಾವು ಜೊತೆಗೆ ಇರುತ್ತೇವೆ. ಗಂಡು ಹೆಣ್ಣು ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಕೊಡಬೇಕಾದ ಗೌರವ, ವೇದಿಕೆ, ಸಂಬಳ ನೀಡಬೇಕು. ಯಾರಿಗೂ ಆತ್ಮ ಗೌರವಕ್ಕೆ ಧಕ್ಕೆ ಬರಬಾರದು. ಕೆಲವರಿಂದ ಏನಾದರೂ ತಪ್ಪಾಗಿದ್ದರೆ ಅವರಿಗೆ ಏನು ಬೇಕಾದರೂ ಮಾಡಿ. ಅದನ್ನು ಬಿಟ್ಟು ಸಿನಿಮಾ ನಟರು, ನಟಿಯರು ಎಂದು ಜನರಲೈಸ್ ಮಾಡಬೇಡಿ ಎಂದು ಹೇಳಿದ್ದಾರೆ.