ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.
ಹನಿಟ್ರ್ಯಾಪ್ ಕೇಸ್‌ನ್ನು ನ್ಯಾಯಾಧೀಶರ ನೇತೃತ್ವದ (Judicial Inquiry) ಅಥವಾ ಸಿಬಿಐನಿಂದ (CBI) ತನಿಖೆ ಮಾಡಿಸಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗ್ರಹಿಸಿದ್ದಾರೆ.
ವಿಧಾನಸೌಧ ಸಾಕಷ್ಟು ಮಹನೀಯರು ಪ್ರತಿನಿಧಿಸಿರುವ ಒಂದು ದೇವಾಲಯ. ಇಂತಹ ದೇವಾಲದಲ್ಲಿ ಈ ಮೊದಲು ವಿಷಯಾಧಾರಿತ ಚರ್ಚೆ ಮಾಡಿದ್ದಾರೆ. ಈಗ ಸಿಎಂ ಕ್ಯಾಬಿನೆಟ್‌ನ ಪ್ರಭಾವಿ ಮಂತ್ರಿಗಳು ಸದನದಲ್ಲೇ ಹನಿಟ್ರ್ಯಾಪ್ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎನ್ನುವುದಕ್ಕೆ ಇದು ಉದಾಹರಣೆ. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಇಲ್ಲವೇ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಬಿತ್ತು. ಕೊನೆಗೆ ಅವರಿಗೆ ಟಿಕೆಟ್ ಕೊಡದಂತೆ ಕಾಂಗ್ರೆಸ್ ನಡು ಬೀದಿಯಲ್ಲಿ ಕೈ ಬಿಡ್ತು. ಇವತ್ತು ST ಸಮುದಾಯದ ಪ್ರಭಾವಿ ನಾಯಕ ರಾಜಣ್ಣ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 224 ಶಾಸಕರಿಗೆ ರಕ್ಷಣೆ ಕೊಡದ ಈ ಸರ್ಕಾರಕ್ಕೆ ರಾಜ್ಯದ ಜನರಿಗೆ ರಕ್ಷಣೆ ಕೊಡೋಕೆ ಸಾಧ್ಯನಾ? ಸರ್ಕಾರ ಉತ್ತರ ಕೊಡಬೇಕು ಎಂದಿದ್ದಾರೆ.
ಯಾರು ತಪ್ಪಿತಸ್ಥರು ಇದ್ದಾರೆ. ಯಾರು ಎಷ್ಟೇ ಪ್ರಭಾವಿಗಳು ಇರಲಿ. ಅವರ ಮೇಲೆ ಕ್ರಮ ಆಗಬೇಕು. ಕಾಂಗ್ರೆಸ್‌ನಲ್ಲಿ SC-ST ಸಮುದಾಯದವರು ಮೀಟಿಂಗ್ ಮಾಡೋಕೆ ಫ್ರೀಡಂ ಇಲ್ಲ. ಒಬ್ಬ ಮಹಾನುಭಾವರು ತಡೆ ಹಾಕ್ತಾರೆ. ಹೈಕಮಾಂಡ್ ನಾಯಕರನ್ನ ಕರೆದುಕೊಂಡು ಬಂದು ಮೀಟಿಂಗ್ ರದ್ದು ಮಾಡ್ತಾರೆ. ಹನಿಟ್ರ್ಯಾಪ್ ಮಾಡಿದ ನಾಯಕ ಯಾರು ಅಂತ ನನಗೆ ಗೊತ್ತಿಲ್ಲ. ಅದಕ್ಕೆ ತನಿಖೆ ಆಗಬೇಕು ಎಂದಿದ್ದಾರೆ.