ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಇತ್ತೀಚೆಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿರುವ ರಾಜ್ಯ ಸರ್ಕಾರ ಈಗ ಹಾಲಿನ ದರ ಏರಿಕೆ ಮಾಡಿದೆ.
ಹಾಲಿನ ದರದ ಹೆಚ್ಚಳ ಪಟ್ಟಿ- ಪ್ರತಿ ಲೀಟರ್ ಗೆ….
ಟೋನ್ಡ್ ಹಾಲು ನೀಲಿ ಪೊಟ್ಟಣ ಹಳೆಯ ದರ- 42 ರೂ., ಹೊಸ ದರ- 46 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು ಹಳೆಯ ದರ- 43 ರೂ., ಹೊಸ ದರ – 47 ರೂ.
ಹಸುವಿನ ಹಾಲು ಹಸಿರು ಪಟ್ಟಣ- ಹಳೆಯ ದರ- 46 ರೂ., ಹೊಸ ದರ – 50 ರೂ.
ಶುಭಂ ಕೇಸರಿ ಪಟ್ಟಣ, ಸ್ಪೆಷಲ್ – ಹಳೆಯ ದರ- 48 ರೂ., ಹೊಸ ದರ – 52 ರೂ.
ಮೊಸರು ಪ್ರತಿ ಕೆಜಿಗೆ ಹಳೆಯ ದರ- 50 ರೂ., ಹೊಸ ದರ – 54 ರೂ.
ಹಾಲಿನ ದರ ಏರಿಕೆಯ ಕುರಿತು ಸಚಿವ ರಾಜಣ್ಣ ಮಾಹಿತಿ ನೀಡಿದರು. ವಿಜಯಪುರದಲ್ಲಿ ಹಾಲು ಉದ್ಯಮಿ ನಷ್ಟದಲ್ಲಿದೆ. ನಷ್ಟ ಇರುವಲ ಕಡೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ತೆಗೆಯಲು ಸೂಚಿಸುತ್ತೇವೆ. ದುಂದುವೆಚ್ಚ ಕಡಿಮೆ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ 700 ಕೋಟಿ ರೂ. ಬಾಕಿ ಉಳಿಸಿ ಹೋಗಿದ್ದರು. ಈಗ ಬಿಡುಗಡೆ ಮಾಡಲಾಗಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ನಮಗಿಂತಲೂ ಹಾಲಿನ ದರ ಹೆಚ್ಚಿದೆ. ಕೇರಳದಲ್ಲಿ 52 ರೂ, ಹರಿಯಾಣದಲ್ಲಿ 35 ರೂ, ಇದೆ. ಮಧ್ಯಪ್ರದೇಶದಲ್ಲಿ 34 ರೂ, ಪಂಜಾಬ್ ನಲ್ಲಿ 56 ರೂ. ಆದರೆ, ನಮ್ಮಲ್ಲೇ ಕಡಿಮೆ ಇರುವುದು ಎಂದು ಹೇಳಿದ್ದಾರೆ.