ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ದಿನಗಣನೆ ಆರಂಭವಾಗಿದೆ. ಬಿಗ್ ಬಾಸ್ ಸೆಪ್ಟೆಂಬರ್ 29ರಿಂದ ಚಾಲನೆ ಸಿಗಲಿದೆ.
ಈ ವಿಷಯವಾಗಿ ಮಾತನಾಡಿದ ಕಿಚ್ಚ ಸುದೀಪ್, ಈ ಬಾರಿ ನಿರೂಪಣೆ ಮಾಡೋದು ಬೇಡ ಅಂತ ಅಂದುಕೊಳ್ಳಲಾಗಿತ್ತು. ಈ ಸೀಸನ್ಗೆ ಗ್ಯಾಪ್ ನೀಡೋಣ ಎಂಬ ಆಲೋಚನೆ ನನಗೆ ಇತ್ತು. ಗಿಮಿಕ್ ಮಾಡಿ ಯಾವುದೇ ಪ್ರೋಮೋ ಮಾಡುವ ಅವಶ್ಯಕತೆ ನಮಗೆ ಇಲ್ಲ. ಗಿಮಿಕ್ ನಿಂದ ಓಡುವ ಜೀವನ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.
ನನ್ನ ನಿರ್ಧಾರ ತಿಳಿಸಿದ್ದು ನಿಜ. ಅದರಿಂದ ನನಗೂ ಮತ್ತು ಕಲರ್ಸ್ ವಾಹಿನಿಯವರಿಗೆ ಹೊಂದಾಣಿಕೆ ಇಲ್ಲ ಅಂತೇನೂ ಅಲ್ಲ. ಹೊಂದಾಣಿಕೆ ಇಲ್ಲದೇ ಇದ್ದಿದ್ದರೆ 10 ವರ್ಷಗಳ ಜರ್ನಿ ಆಗುತ್ತಿರಲಿಲ್ಲ. ಬಿಗ್ ಬಾಸ್, ಕ್ರಿಕೆಟ್ ಅಂತ ಬ್ಯುಸಿ ಆಗಿದ್ದೆ. ಬರೀ ಅದರಲ್ಲೇ ಇದ್ದೀನಿ. ಜನರು ಇಷ್ಟಪಟ್ಟಿದ್ದಾರೆ. ಅದಕ್ಕಾಗಿ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಶುರುವಾದರೆ ನನ್ನ ಲೈಫ್ ಸ್ವಲ್ಪ ಮ್ಯೂಟ್ ಆಗುತ್ತದೆ ಎಂದು ಹೇಳಿದ್ದಾರೆ.
ಬೇರೆ ಯಾರ ಜೊತೆಗಾದರೂ ಮುಂದುವರಿಯಿರಿ ಎಂದೆ. ಅದು ಯಾವುದೇ ತಪ್ಪು ತಿಳಿವಳಿಕೆಯಿಂದ ಆಗಿದ್ದಲ್ಲ. ನನ್ನ ನಿರ್ಧಾರ ಹೇಳಿದ ಬಳಿಕ ಕಲರ್ಸ್, ಎಂಡಮಾಲ್ ಕಂಪನಿಗಳಿಂದ ಅನೇಕರು ನನ್ನನ್ನು ಒಪ್ಪಿಸಲು ನಮ್ಮ ಮನೆಗೆ ಬಂದರು. 10 ವರ್ಷದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದ್ದು ಎಂದು ಕಿಚ್ಚ ಹೇಳಇದ್ದಾರೆ. ಸದ್ಯ ಕಿಚ್ಚ ಸತತ 11ನೇ ವರ್ಷ ನಿರೂಪಣೆ ಮಾಡುತ್ತಿದ್ದಾರೆ.