ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೊತೆಗೆ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ಹಲವರ ಕಟುಂಬಗಳಂತೂ ಬೀದಿಗೆ ಬಂದಂತಾಗಿದೆ. ದರ್ಶನ್ ಕೂಡ ಜೈಲೂಟ ಮಾಡಲು ಒದ್ದಾಡುತ್ತಿದ್ದಾರೆ. ಹೀಗಾಗಿ ಮನೆಯೂಟ ಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ಕೋರ್ಟ್ ಇದಕ್ಕೆ ನಿರಾಕರಿಸಿದೆ. ಈ ಮಧ್ಯೆ ಈಗ ಅವರ ಪ್ರಕರಣದ ಬಗ್ಗೆ ಕಾಳಿ ಉಪಾಸಕಿ ಮಾತನಾಡಿದ್ದಾರೆ.
ನಟ ದರ್ಶನ್ ಅವರ ಜೀವನದಲ್ಲಿ ಸಾಕಷ್ಟು ಕಂಟಕಗಳಿವೆ. ಸಮಸ್ಯೆಗಳು ಬೆನ್ನು ಹಿಂದೆಯೇ ಕಾಡುತ್ತವೆ ಎಂದು ಕಾಳಿಕಾಮಾತೆ ಉಪಾಸಕಿಯೊಬ್ಬರು ಚಂದಾ ಪಾಂಡೆ ಮೊದಲೇ ಎಚ್ಚರಿಸಿದ್ದರು ಎನ್ನಲಾಗಿದೆ. ಈ ಕುರಿತು ಅವರೇ ಮಾತನಾಡಿದ್ದಾರೆ. ನಾನು 2018ರಲ್ಲಿ ದರ್ಶನ್ ಗೆ ಎಚ್ಚರಿಕೆ ನೀಡಿದ್ದೆ’ ಎಂದಿದ್ದಾರೆ. ಅವರ ಸ್ನೇಹಿತರೊಬ್ಬರು ಫೋಟೋ ತೋರಿಸಿ ಮೈಸೂರಿಗೆ ರೇಸ್‌ಗೆ ಹೋಗ್ತಿದ್ದಾರೆ ಅಂದರು. ನಾನು ಅವತ್ತು ಹೋಗುವುದು ಬೇಡ ಅಂದೆ. ಆಗ ಅವರಿಗೆ ಆ್ಯಕ್ಸಿಡೆಂಟ್ ಆಗಿ ಕೈ ಫ್ಯಾಕ್ಚರ್ ಆಯ್ತು. ಆ ಬಳಿಕ ಅವರೇ ನನ್ನ ಬಳಿ ಬರುತ್ತೇನೆ ಎಂದು ಫೋನ್ ಮಾಡಿ ಬಂದಿದ್ದರು.
ಆನಂತರ ದರ್ಶನ್ ಹಾಗೂ ನಾನು ಇರುವ ಫೋಟೋವನ್ನು ಅವರ ಶಿಷ್ಯ ವೈರಲ್ ಮಾಡಿದ್ದರು. ಇದಕ್ಕೆ ನಾನೇ ಆ ರೀತಿ ಮಾಡಿ ಪ್ರಚಾರ ಪಡೆಯುತ್ತಿರಬಹುದು ಎಂದು ಅಂದುಕೊಂಡು ದರ್ಶನ್ ಬರುವುದನ್ನು ಬಿಟ್ಟರು ಎಂದು ಹೇಳಿದ್ದಾರೆ. ಆನಂತರ ದರ್ಶನ್ ನನ್ನ ಮಾತುಗಳನ್ನು ತಳ್ಳಿ ಹಾಕಿದರು. ನನ್ನ ಸಲಹೆ ಮೀರಿ ವಿಗ್ ಹಾಕಿದರು. ಇದರಿಂದಾಗಿ ಅವರ ಗ್ರಹಗತಿಯಲ್ಲಿ ಬದಲಾವಣೆ ಆಗಿದೆ. ಅವರಿಗೆ ಇನ್ನೂ ಸಾಕಷ್ಟು ಗಂಡಾಂತರ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ವಿಗ್ ಅಥವಾ ಕೂದಲಿಗೂ ಶನಿಗೂ ಸಂಬಂಧ ಇದೆ. ವಿಗ್ ಧರಿಸುವುದು ತಪ್ಪು ಅನ್ನಲ್ಲ. ಅವರು ಆರ್ಟಿಸ್ಟ್, ಲೈಟ್ ಬೆಳಕಿನಿಂದ ನಿಂದ ಕೂದಲು ಹೆಚ್ಚಾಗಿ ಉದುರುತ್ತದೆ. ಆದರೆ ಜನ್ಮತಃ ಬಂದಿರುವ ಕೇಶವಿನ್ಯಾಸ ಮಾಡಿಸಿಕೊಂಡರೆ ಉತ್ತಮ ಎಂದು ಹೇಳಿದ್ದಾರೆ. ಆದರೆ, ಇದು ಗ್ರಹಗತಿಯದ್ದೋ? ದರ್ಶನ್ ರದ್ದೋ? ನೀವೇ ವಿಚಾರ ಮಾಡಿ.


















