ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ಜೈಲು ಪಾಲಾಗಿದೆ. ಈಗಾಗಲೇ ಅವರನ್ನು ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ. ಈ ಕರಿತು ತನಿಖೆ ನಡೆಯುತ್ತಿದ್ದರೆ, ಹಲವರು ಈ ಕುರಿತು ಪರ – ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಹಲವರಂತೂ ಈ ಘಟನೆ ಕುರಿತು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ.
ಆರಂಭದಲ್ಲಿ ಯಾವ ಸೆಲೆಬ್ರಿಟಿಯೂ ಈ ಕುರಿತು ಮಾತನಾಡಲು ಮುಂದೆ ಬಂದಿರಲಿಲ್ಲ. ಈಗ ಒಬ್ಬೊಬ್ಬರೇ ಮಾತನಾಡಲು ಆರಂಭಿಸಿದ್ದಾರೆ. ಹಲವರಿಗೆ ಇಂದಿಗೂ ಇದು ನಂಬಲು ಆಗುತ್ತಿಲ್ಲ. ಈ ಮಧ್ಯೆ ಡಾಲಿ ಧನಂಜಯ್ ಈ ಕುರಿತು ಮಾತನಾಡಿದ್ದು, ತಪ್ಪು ನಡೆದಿದ್ದರೆ ಶಿಕ್ಷೆ ಆಗಲಿ. ನಡೆದ ಕೃತ್ಯನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಬದುಕು ಅವಕಾಶಗಳನ್ನು ಕೊಟ್ಟೇ ಕೊಡುತ್ತದೆ. ಮತ್ತೆ ಬಂದು ದರ್ಶನ್ ಪ್ರೇಕ್ಷಕರನ್ನು ಮನರಂಜಿಸಲಿ ಎಂದು ಹೇಳಿದ್ದಾರೆ.