ಬೆಂಗಳೂರು: ಹನಿಟ್ರ್ಯಾಪ್ (Honey Trap) ವಿಚಾರ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗುತ್ತಿದೆ. ಇದು ಕಾಂಗ್ರೆಸ್ ನಲ್ಲೇ ಆಂತರಿಕ ಕಚ್ಚಾಟಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಡಿಕೆಶಿ (DK Shivakumar) ಪ್ರತಿಕ್ರಿಯೆ ನೀಡಿದ್ದು, ರಾಜಣ್ಣ ನನ್ನ ಬಳಿಯೂ ಕೆಲವೊಂದು ವಿಚಾರ ಹೇಳಿಕೊಂಡಿದ್ದಾರೆ. ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಣ್ಣ (KN Rajanna) ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕೆಲವೊಂದು ವಿಚಾರ ಹೇಳಿದ್ದಾರೆ. ನಾನು ಕೂಡ ದೂರು ಕೊಡಲು ಹೇಳಿದ್ದೇನೆ. ಅದನ್ನು ನಿಮ್ಮ ಮುಂದೆ ಮಾತನಾಡಲು ಆಗುವುದಿಲ್ಲ ಎಂದಿದ್ದಾರೆ.
ರಾಜೇಂದ್ರ ರಾಜಣ್ಣ ಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನನ್ನ ಬಳಿ ಯಾರ ಬಗ್ಗೆಯೂ ಕೇಳಬೇಡಿ. ಸಿಎಂ ಅಂದಾಗ ಎಲ್ಲರೂ ಭೇಟಿ ಮಾಡ್ತಾರೆ. ಸದನದಲ್ಲಿ ಗರಂ ಆದ್ರೆ ಅದನ್ನ ನಿಮ್ಮಬಳಿ ಇಟ್ಟುಕೊಳ್ಳಿ, ಎಲ್ಲಾ ವಿಚಾರ ಬೋಗಸ್. ಸುಮ್ಮನೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜೇಂದ್ರ, ರಾಜಣ್ಣ ದೂರು ನೀಡುವ ಕುರಿತು ಮಾತನಾಡಿದ ಅವರು, ಸಿಎಂ ಅವರನ್ನೇ ಕೇಳಿ, ಅವರೇ ಹೇಳ್ತಾರೆ. ನಾನು ಕೆಪಿಸಿಸಿ ಅಧ್ಯಕ್ಷ ಆಗಿ ಅವರನ್ನ ಕೇಳಿದೆ. ನನ್ನ ಬಳಿ ಏನೂ ಇಲ್ಲ ಅಂತ ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಚರ್ಚೆ ಬಿಚ್ಚಿ ಹೇಳಲು ಆಗಲ್ಲ. ಅವರದ್ದೇನೋ ಇದರ ಮೇಲೆ ಹೇಳಿದ್ದಾರೆ. ಏನಾದ್ರೂ ಇದ್ರೆ ಕಂಪ್ಲೆಂಟ್ ಕೊಡಪ್ಪ ಅಂತ ಹೇಳಿದ್ದೇನೆ ಎಂದಿದ್ದಾರೆ.