ನಟ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ಅಪ್ಪು ಚಿತ್ರ ಬಿಡುಗಡೆಯಾಗಿದೆ. ವೀರೇಶ್ ಥಿಯೇಟರ್‌ಗೆ ಆಗಮಿಸಿ ಅಭಿಮಾನಿಗಳೊಂದಿಗೆ ‘ಅಪ್ಪು’ ಚಿತ್ರವನ್ನು ನಿರೂಪಕಿ ಅನುಶ್ರೀ (Anushree) ವೀಕ್ಷಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಅಪ್ಪು ಸರ್ ಅಭಿಮಾನಿಗಳಿಗೆ ಇಂದು ಹಬ್ಬ. ಅವರ ಚಿತ್ರದ ಲಾಂಚ್ ಟೈಮ್‌ನಲ್ಲಿ ನಾವು ಹೇಗೆ ಸಂಭ್ರಮಿಸುತ್ತಿದ್ದೆವೋ ಈಗಲೂ ಹಾಗೇ ಸಂಭ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇಂದು ಅಶ್ವಿನಿ ಮೇಡಂ ಅವರ ಹುಟ್ಟುಹಬ್ಬ. ಹಾಗಾಗಿ ಎಲ್ಲಾ ಅಪ್ಪು ಅಭಿಮಾನಿಗಳ ಪರವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಲವ್ ಯೂ ಅಪ್ಪು ಸರ್ ಎಂದು ಹೇಳಿದ್ದಾರೆ.