ಬೆಂಗಳೂರು: ನಟ ದರ್ಶನ್, ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಸುಮಲತಾ (Sumalatha) ಸೇರಿದಂತೆ ಎಲ್ಲರನ್ನೂ ಅನ್‌ಫಾಲೋ ಮಾಡಿದ ವಿಚಾರ ಈಗ ಚರ್ಚಿತ ವಿಷಯವಾಗುತ್ತಿದ್ದು, ಈ ಕುರಿತು ಸುಮಲತಾ ಮಾತನಾಡಿದ್ದಾರೆ.
ದರ್ಶನ್ ಯಾವಾಗಲೂ ನನ್ನ ಮಗ. ನನ್ನ ಮಗ ಹಾಗೂ ನಾನು ಹಂಚಿಕೊಂಡಿರುವ ಪೋಸ್ಟ್ ಗೂ ಅವರಿಗೂ ಸಂಬಂಧವಿಲ್ಲ. ದರ್ಶನ್ (Darshan) ಅನ್‌ಫಾಲೋ ಮಾಡಿರುವುದಕ್ಕೂ ಸುಮಲತಾ ಮಾರ್ಮಿಕವಾಗಿ ಪೋಸ್ಟ್ ಹಾಕಿರೋದ್ದಕ್ಕೂ ಫ್ಯಾನ್ಸ್ ಲಿಂಕ್ ಮಾಡಿ ಮಾತನಾಡುತ್ತಿದ್ದರು. ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಸುಮಲತಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ನನಗೆ ಅಂತ ವಿಶೇಷವಾಗಿ ಯಾಕೆ ಪಾಯಿಂಟ್ ಔಟ್ ಮಾಡುತ್ತೀರಿ? ನನಗೆ ಗೊತ್ತಾಗುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ. ನಾನು ಜನರಲ್ ಆಗಿ ಪೋಸ್ಟ್ ಮಾಡಿದ್ದೇನೆ. ನಾನು ಬರೆದ ಸಾಲುಗಳಲ್ಲ ಅವು. ಎಲ್ಲೋ ನೋಡಿದ ಪೋಸ್ಟ್ ಹಾಕಿದ್ದೇನಷ್ಟೇ. ದರ್ಶನ್ ಯಾವಾತ್ತಿದ್ದರೂ ನನ್ನ ಮಗ ಅಂತ ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಅದು ಅವತ್ತಿಗೂ ಅಷ್ಟೇ ಎಂದಿದ್ದಾರೆ.