ಬಹುತೇಕ ನಮ್ಮಲ್ಲಿ ನಿದ್ರಾಹೀನತೆ ಎನ್ನುವುದು ಕಂಡುಬರುತ್ತದೆ. ದೇಹ ಆಯಾಸಕ್ಕೆ ತಿರುಗಿದಾಗ ನಿದ್ರಾಹೀನತೆಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಇತ್ತೀಚಿನ ದಿನಗಳಲ್ಲಂತೂ ಬದಲಾದ ಲೈಫ್ ಸ್ಟೈಲ್ ನಿಂದ ನಿದ್ರೆಯ ಅಭಾವ ಹೆಚ್ಚಾಗಿ ಬೆಂಬಿಡದೆ ಕಾಡುತ್ತಿರುತ್ತದೆ. ಇಂತಹ ಕಾಯಿಲೆ ಇದ್ದರೆ, ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ.
ಅತೀ ಕಡಿಮೆ ಮೊಬೈಲ್ ಬಳಕೆ!
ನಿದ್ರಾಹೀನತೆ ಕಂಡು ಬಂದರೆ ರಾತ್ರಿ ಹೊತ್ತು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದು ತಪ್ಪು. ಪ್ಪು. ತಡವಾದ ರಾತ್ರಿಯಲ್ಲಿ ಫೋನ್ ಬಳಕೆ ಮಾಡುವ ಹವ್ಯಾಸವಿದ್ದರೆ ಖಂಡಿತವಾಗಿ ನಿದ್ರಾಹೀನತೆ ಕಂಡುಬರುವುದರಲ್ಲಿ ಸಂಶಯವೇ ಇಲ್ಲ.
ಹೆಚ್ಚಿನ ಕಾಫಿ, ಟೀ ಸೇವನೆ!
ಬೆಳಗ್ಗೆ ಕಾಫಿ ಅಥವಾ ಟೀ ಸೇವನೆ ಹೆಚ್ಚಾಗಿ ಮಾಡಿದರೆ ನಿದ್ರಾಹೀನತೆ ಕಂಡು ಬರುತ್ತದೆ. ಕೂಲ್ ಡ್ರಿಂಕ್ಸ್, ರೆಡ್ ವೈನ್, ಚಾಕಲೇಟ್, ಚೀಸ್ ಇತ್ಯಾದಿಗಳು ನಿದ್ರೆಗೆ ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಸಂಜೆ ಹೊತ್ತಿನಲ್ಲಿ ಟೀ ಕಾಫಿ ಕುಡಿದರೆ ರಾತ್ರಿ ಹೊತ್ತು ನಿದ್ರೆ ಬರಲ್ಲ.
ನಿಗದಿತ ವ್ಯಾಯಾಮ ಮುಖ್ಯ!
ಮನುಷ್ಯನಿಗೆ ವ್ಯಾಯಾಮ ಎನ್ನುವುದು ಬಹಳ ಮುಖ್ಯ. ಮನಸ್ಸಿನ ಹತೋಟಿಗೆ ನಿಗದಿತ ವ್ಯಾಯಾಮ ಮಾಡುವುದು ಒಳ್ಳೆಯದು. ಹೊರಾಂಗಣದಲ್ಲಿ ವಾಕಿಂಗ್ ಮಾಡುವುದು, ಓಡುವುದು ಹಾಗೂ ಸೈಕ್ಲಿಂಗ್ ಮಾಡುವುದು ತಾಜಾ ಗಾಳಿಯಲ್ಲಿ ಮನಸ್ಸು ಮತ್ತು ದೇಹವನ್ನು ಚೈತನ್ಯಗೊಳಿಸುತ್ತದೆ. ರಾತ್ರಿಯಲ್ಲಿ ಉತ್ತಮ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ವ್ಯಾಯಾಮ ಮಾಡದೇ ಇದ್ದರೆ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ನಾವು ಹೇಳಿರುವುದು ಅಂತಿಮವಲ್ಲ. ವೈದ್ಯರನ್ನು ಸಂಪರ್ಕಿಸಿ ನಿಮ್ಮ ನಿದ್ರಾಹೀನತೆಯನ್ನು ಹೋಗಲಾಡಿಸಿಕೊಳ್ಳಿ.