ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಸರಣಿ ಎಂಬಂತೆ ಹೃದಯಾಘಾತ ಪ್ರಕರಣಗಳು ದಾಖಲಾಗುತ್ತಿದ್ದು, ಹಲವರು ಈ ಪ್ರಕರಣಗಳಿಗೆ ಕೊವಿಡ್ -19 ಲಸಿಕೆ ಕಾರಣ ಎಂದು ಆರೋಪಿಸುತ್ತಿದ್ದಾರೆ. ಆದರೆ, ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಜಯದೇವ ತಜ್ಞರ ವರದಿ ಹೇಳುತ್ತಿದೆ.
ಜಯದೇವ ತಜ್ಞರ ಪ್ರಾಥಮಿಕ ವರದಿಗೂ ICMR ಅಧ್ಯಯನಕ್ಕೂ ಹೆಚ್ಚು ಸಾಮ್ಯತೆ ಇದೆ. ಈಗಾಗಲೇ ಹೃದಯಾಘಾತದ ಪ್ರಾಥಮಿಕ ವರದಿಯನ್ನು ಜಯದೇವ ತಜ್ಞರು ಸಿದ್ಧಪಡಿಸಿದ್ದಾರೆ. ತಾಂತ್ರಿಕ ಸಮಿತಿಯ ಪ್ರಾಥಮಿಕ ವರದಿಯಲ್ಲಿ ಶಾಕಿಂಗ್ ಅಂಶಗಳು ಪತ್ತೆಯಾಗಿವೆ.
ಏನಿದೆ ಪ್ರಾಥಮಿಕ ವರದಿಯಲ್ಲಿ?
ಅತಿಯಾದ ತೂಕ, ಧೂಮಪಾನ, ಫಾಸ್ಟ್ ಫುಡ್, ಆಹಾರ ಸೇವನೆಯಿಂದ ಸಡನ್ ಡೆತ್ ಆಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಕುರಿತು ಆಳ ಅಧ್ಯಯನಕ್ಕಾಗಿ ಸಮಿತಿ ಮುಂದಾಗಿದೆ. ಜೀವನಶೈಲಿ, ಆಹಾರ ಪದ್ಧತಿ ಹಾಗೂ ಅನುವಂಶಿಯತೆ ಹೃದಯಘಾತಕ್ಕೆ ಪ್ರಮುಖ ಕಾರಣಗಳು ಎಂದು ವರದಿ ಹೇಳುತ್ತಿದೆ.
ಅತಿಯಾದ ಬೊಜ್ಜು, ಮಾಂಸ ಸೇವನೆ, ಮದ್ಯಪಾನದಿಂದ ಸಾವುಗಳು ಸಂಭವಿಸುತ್ತಿವೆ. ರೆಡ್ ಮೀಟ್ ಸೇವನೆಯಿಂದ ಕೊಲೆಸ್ಟ್ರಾಲ್ ಬಂದಿರುವ ಸಾಧ್ಯತೆ ಇದೆ. ಇದರಿಂದ ಹೃದಯಾಘಾತಗಳು ಆಗುತ್ತಿವೆ ಎಂದು ವರದಿ ಹೇಳುತ್ತಿದೆ.