ನಟ ದರ್ಶನ್ (Darshan) ರೇಣುಕಾಸ್ವಾಮಿ ಕೊಲೆ (Renukaswamy Murder Case) ಕೇಸ್ ನಲ್ಲಿ ಪೊಲೀಸರ ವಶದಲ್ಲಿದ್ದಾರೆ. ಈ ವಿಚಾರವಾಗಿ ನಿರ್ಮಾಪಕ ಉಮಾಪತಿ(Umapathy) ಪ್ರತಿಕ್ರಿಯೆ ನೀಡಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ.
ಕೊಲೆ ಮಾಡುವುದು ಅಕ್ಷಮ್ಯ ಅಪರಾಧ. ಅದು ಯಾರೇ ಮಾಡಿದರೂ ತಕ್ಕ ಶಿಕ್ಷೆಯಾಗಬೇಕು. ರೇಣುಕಾಸ್ವಾಮಿ ಬಿಡಿ ಎಂದು ಎಷ್ಟೇ ಬೇಡಿಕೊಂಡರೂ ಬಿಟ್ಟಿಲ್ಲ. ಮನಬಂದಂತೆ ಥಳಿಸಿ, ವಿತೃತವಾಗಿ ಹಲ್ಲೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೆಗ್ಗಾರ್ ನಲ್ಲಿ ತರಿಸಿ ಹೊಡೆದಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಅವರನ್ನು ಸಾಯಿಸಬೇಕು ಅಂತ ಯೋಚಿಸಿಯೇ ಹೀಗೆ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.
ನನ್ನ ತಂದೆ ತೀರಿಕೊಂಡು 12 ವರ್ಷವಾಗಿದೆ. ಅವರು ನಮಗೆ ಹೇಗೆ ದಾರಿ ತೋರಿಸಿದರು ಎಂಬುವುದು ನಮಗೆ ಗೊತ್ತಿಲ್ಲ. ಈಗ ಹುಟ್ಟಲಿರುವ ಮಗುವಿಗೆ ನಿಮ್ಮ ಅಪ್ಪ ಹೀಗೆ ಸತ್ತ ಅಂತ ಗೊತ್ತಾದರೆ ಎಷ್ಟು ನೋವಾಗುತ್ತದೆ. ರೇಣುಕಾಸ್ವಾಮಿ ಪತ್ನಿಗೆ ಈ ಘಟನೆಯಿಂದ ಮಾತನಾಡಲು ಬರುತ್ತಿಲ್ಲ. ಅವರೆಲ್ಲಾ ಮುಗ್ಧ ಜನ. ಹೀಗೆಲ್ಲ ಆಗತ್ತೆ ಅಂದ್ರೆ ರೇಣುಕಾಸ್ವಾಮಿ ಹೀಗೆ ಮಾಡ್ತಿದ್ನಾ? ದರ್ಶನ್ ಮೇಲಿನ ಪ್ರೀತಿ ಅಭಿಮಾನಕ್ಕೆ ಹೀಗೆ ಮಾಡಿದ್ದಾನೆ ಅಲ್ವಾ? ಎಂದು ಉಮಾಪತಿ ಬೇಸರ ವ್ಯಕ್ತಪಡಿಸಿದ್ದಾರೆ.
ಎದೆಯ ಮೇಲೆ ಹಚ್ಚೆ ಹಾಕಿಕೊಂಡು ನಾನು ಎದೆ ಬಗೆದು ತೋರಿಸಿ ಬಿಡ್ತೀನಿ ಅನ್ನೋಕೆ ಶ್ರೀರಾಮನ ತೋರಿಸುವಂತಹ ಆಂಜನೇಯ ಈಗ ಇಲ್ಲ. ಭಕ್ತಿ ತೋರಿಸುವ ಕಾಲ ಇದಲ್ಲ ಎಂದಿದ್ದಾರೆ.