ಕೋಲ್ಕತ್ತಾ: ಸಂದೇಶ್‍ಖಾಲಿ ಪ್ರಕರಣದಲ್ಲಿ ಮಹಿಳೆಯರು ಯೂಟರ್ನ್ ಹೊಡೆದಿದ್ದಾರೆ.
ತಮ್ಮ ಮೇಲೆ ಟಿಎಂಸಿ (TMC) ಮುಖಂಡರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ಮೂವರು ಮಹಿಳೆಯರ ಪೈಕಿ ಇಬ್ಬರು ಈಗಾಗಲೇ ವಿರೋಧ ಹೇಳಿಕೆ ನೀಡಿದ್ದಾರೆ. ನಮ್ಮ ಮೇಲೆ ಯಾವುದೇ ದೌರ್ಜನ್ಯಗಳು ನಡೆದಿಲ್ಲ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಬಿಳಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ನಾನೆಂದಿಗೂ ರಾತ್ರಿ ಹೊತ್ತಲ್ಲಿ ಪಾರ್ಟಿ ಆಫೀಸ್‍ಗೆ ಹೋಗಿಲ್ಲ. ನನಗೆ ಲೈಂಗಿಕ ಕಿರುಕುಳವನ್ನು ಯಾರು ನೀಡಿಲ್ಲ ಎಂದಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂಬುವುದನ್ನು ಕುರಿತು ಕೇಸ್ ಹಿಂಪಡೆದಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ. ಅಲ್ಲದೇ, ತಮಗೆ ರಕ್ಷಣೆ ಬೇಕು ಎಂದು ಕೋರಿ ಪೊಲೀಸರಿಗೆ ಮತ್ತೊಂದು ದೂರು ನೀಡಿದ್ದಾರೆ.
ಬಿಜೆಪಿಯ ಸಂತ್ರಸ್ತೆಯರ ಆರೋಪವನ್ನು ತಳ್ಳಿ ಹಾಕಿದೆ. ಅಲ್ಲದೇ, ಮಹಿಳೆಯರ ವಿರೋಧ ಹೇಳಿಕೆ ಖಂಡಿಸಿದೆ.