ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಅರಿಶಿನ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುದೀಪ್ ಅವರ ಅಕ್ಕನ ಮಗನ ಅರಿಶಿನ ಶಾಸ್ತ್ರ ಶ್ರೀಲಂಕಾದಲ್ಲಿ ನಡೆದಿದ್ದು, ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಡಿಸೆಂಬರ್ 4 ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ಶರಣ್ ಸುರೇಶ್ – ತಾರಿಣಿ ವಿವಾಹ ಮಹೋತ್ಸವ ನಡೆಯಲಿದೆ.

ಅಕ್ಕನ ಮಗನ ಮದುವೆಯಲ್ಲಿ ಪ್ರೀತಿಯ ಮಗಳಿಗೆ ಅರಿಶಿನ ಹಚ್ಚಿರೋ ಸುದೀಪ್, ಕೆನೆ ಬಣ್ಣದ ಟ್ರೆಡಿಷನಲ್ ವೇರ್ನಲ್ಲಿ ಕ್ಯೂಟ್ ಕಾಣಿಸಿದ್ದಾರೆ. ಅರಿಶಿನ ಶಾಸ್ತ್ರದಲ್ಲಿ ಮುದ್ದಾಗಿ ಕಾಣುತ್ತಿದ್ದ ಕಿಚ್ಚನ ಮಗಳು ಫಂಕ್ಷನ್ ಎಂಜಾಯ್ ಮಾಡಿದ್ದಾರೆ. ಕಿಚ್ಚ ಅವರ ಪತ್ನಿಯೂ ಮಗಳ ಕೆನ್ನೆಗೆ ಅರಶಿನ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಸಾನ್ವಿ ಸುದೀಪ್ ಸೆಲೆಬ್ರೇಷನ್ ನ ಕೆಲವು ಗ್ಲಿಂಪ್ಸ್ ತೋರಿಸಿದ್ದಾರೆ.
ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರಾಠಿ ಬಿಗ್ ಬಾಸ್ ವಿನ್ನರ್ ಸೂರಜ್ ಚವಾಣ್ | ಹುಡುಗಿ ಯಾರು ಗೊತ್ತಾ?



















