ಪಾಟ್ನಾ: ಈ ದಿನ ಉತ್ತಮ ಆಡಳಿತ ಗೆದ್ದಿದೆ, ಅಭಿವೃದ್ಧಿ ಗೆದ್ದಿದೆ, ಜನಪರ ಮನೋಭಾವ ಗೆದ್ದಿದೆ, ಸಾಮಾಜಿಕ ನ್ಯಾಯ ಗೆದ್ದಿದೆ. ಈ ಬಾರಿ ಎನ್‌ಡಿಎಗೆ ಜನಾಶೀರ್ವಾದ ಸಿಕ್ಕಿದೆ. ನಾವೆಲ್ಲ ಬಿಹಾರದ ಅಭಿವೃದ್ಧಿಗೆ ದಣಿವರಿಯದೇ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಇಂದಿನ ಚುನಾವಣಾ ಫಲಿತಾಂಶದ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ ಹಂಚಿಕೊಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಬಿಹಾರದ ಅಭಿವೃದ್ಧಿಗಾಗಿ ಶ್ರಮಿಸುವ ಪ್ರಜ್ಞೆ ಮಾಡಿದ್ದಾರೆ.
2025ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಐತಿಹಾಸಿಕ ಮತ್ತು ಅಭೂತಪೂರ್ವ ಗೆಲುವಿನೊಂದಿಗೆ ಆಶೀರ್ವದಿಸಿದ್ದಕ್ಕಾಗಿ ಬಿಹಾರದಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಈ ಜನಾದೇಶವು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಹಾಗೂ ಬಿಹಾರಕ್ಕಾಗಿ ಕೆಲಸ ಮಾಡಲು ಇನ್ನಷ್ಟು ಶಕ್ತಿ ನೀಡುತ್ತದೆ.
ಬಿಹಾರವನ್ನು ಅಭಿವೃದ್ಧಿಪಡಿಸಲು ಜೊತೆಗೆ ಬಿಹಾರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನ ಹೆಚ್ಚಿನದ್ದಾಗಿ ಕಲ್ಪಿಸಲು. ರಾಜ್ಯದ ಸಂಸ್ಕೃತಿಗೆ ಹೊಸತನ ನೀಡಲು ನಾವು ದಣಿವರಿಯದೇ ಕೆಲಸ ಮಾಡುತ್ತೇವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಯುವಕರು ಮತ್ತು ಮಹಿಳೆಯರ ಸಮೃದ್ಧ ಜೀವನಕ್ಕಾಗಿ ಸಾಕಷ್ಟು ಅವಕಾಶಗಳನ್ನ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಮತದಾರರ ತೀರ್ಪಿಗೆ ನಾವು ತಲೆಬಾಗುತ್ತೇವೆ | ಡಿಕೆ ಶಿವಕುಮಾರ್



















